ರಾಜ್ಯದೆಲ್ಲೆಡೆ ಲೋಡ್‌ ಶೆಡ್ಡಿಂಗ್:‌ ಸರಕಾರದ ಧೋರಣೆ ಖಂಡಿಸಿ ಬೀದಿಗಳಿದ ರೈತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗೃಹಜ್ಯೋತಿ ಯೋಜನೆ ಅನುಷ್ಠಾನವಾದಾಗಿನಿಂದ ರಾಜ್ಯದೆಲ್ಲೆಡೆ ಲೋಡ್‌ ಶೆಡ್ಡಿಂಗ್‌ಗೆ ರೈತರು ಆಕ್ರೋಶ ಹೊರಹಾಕಿದ್ದಾರೆ. ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ಪಂಪ್‌ಸೆಟ್‌ಗಳಿಗೆ ಕರೆಂಟ್‌ ಇಲ್ಲದೆ ಬೆಳೆ ಒಣಗುತ್ತಿವೆ ಎಂದು ಕಿಡಿ ಕಾರಿದರು.

ಸರಕಾರದ ಈ ಧೋರಣೆ ಖಂಡಿಸಿ ಚಾಮರಾಜಗರ, ಬೆಳಗಾವಿ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈಗಾಗಲೇ ಮಳೆ ಕೈಕೊಟ್ಟಿದ್ದು, ಅನ್ನದಾತ ಪರದಾಡುವ ಸ್ಥಿತಿ ಬಂದೊದಗಿದೆ. ಈ ಸಮಯದಲ್ಲಿ ಸರಕರಾದ ಲೋಡ್‌ ಶೆಡ್ಡಿಂಗ್‌ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಅಲ್ಲದೆ ಮಳೆ ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆ ಸರಿಯಾಗಿ ಆಗುತ್ತಿಲ್ಲ, ಈ ಸಮಯದಲ್ಲಿ ಗೃಹಜ್ಯೋತಿಗಾಗಿ, ರೈತರ ಪಂಪ್‌ಸೆಟ್‌ಗಳಿಗೆ ಮೀಸಲಿಟ್ಟಿರುವ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರ ಮುಂದಿನ ಗತಿಯೇನು ಎಂದು ಬೆಳಗಾವಿಯ ಹೆಸ್ಕಾಂ ಕಚೇರಿ ಬಳಿ ಮೇಣದ ಬತ್ತಿ ಉರಿಸಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!