ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನಲ್ಲಿ ಕಳೆದ ಐದು ವರ್ಷಗಳಿಂತ ಒಟ್ಟಾರೆ 81ಲಾಕಪ್ ಡೆತ್‌ಗಳು ವರದಿಯಾಗಿವೆ.
ಇಡೀ ದೇಶದಲ್ಲಿ ಗುಜರಾತ್‌ನಲ್ಲಿಯೇ ಅತಿ ಹೆಚ್ಚು ಕಸ್ಟಡಿ ಸಾವುಗಳು ಸಂಭವಿಸಿವೆ, ಈ ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದು, ಐದು ವರ್ಷಗಳಲ್ಲಿ ಒಟ್ಟಾರೆ 81 ಮಂದಿ ಲಾಕಪ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಏಪ್ರಿಲ್ 1, 2018ರಿಂದ ಮಾರ್ಚ್ 31, 2023ರವರೆಗೆ ಇಡೀ ದೇಶದಲ್ಲಿ ಒಟ್ಟಾರೆ 687 ಮಂದಿ ಲಾಕಪ್‌ನಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ 81 ಜನರು ಗುಜರಾತ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.