ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಋತ್ಯ ರೈಲ್ವೆಯು ಕನ್ನಡದಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಪ್ರಮೋಷನ್ ಪರೀಕ್ಷೆಯನ್ನು ಬರೆಯಲು ನಿರ್ದೇಶಿಸಿದೆ.
ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಈ ವಿಚಾರ ವ್ಯಾಪಕ ಟೀಕೆಗೆ ಗುರಿಯಾದ ನಂತರ ಕೇಂದ್ರ ರೈಲ್ವೇ ಸಚಿವ ಸೋಮಣ್ಣ ಅವರು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ವಿ.ಸೋಮಣ್ಣ ಅವರ ಸೂಚನೆ ಮೇರೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಕನ್ನಡದಲ್ಲಿ ಸಾರ್ವಜನಿಕ ವಲಯದ ಸ್ಪರ್ಧಾತ್ಮಕ ಲೋಕೋ ಪೈಲಟ್ ಪರೀಕ್ಷೆಯನ್ನು ನಡೆಸಲು ನೈಋತ್ಯ ರೈಲ್ವೆ ಅಧಿಕೃತ ಸೂಚನೆಗಳನ್ನು ನೀಡಿದೆ.