ಹ್ಯಾಂಡ್ ಬ್ರೇಕ್ ಹಾಕುವುದನ್ನೇ ಮರೆತ ಲೋಕೋ ಪೈಲಟ್: 70 ಕಿಮೀ ಪ್ರಯಾಣಿಸಿದ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಡ್ಸ್​​ ರೈಲು ಲೋಕೋ ಪೈಲಟ್ ಇಲ್ಲದೆ 70 ಕಿ.ಮೀ. ದೂರು ಪ್ರಯಾಣಿಸಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲದ ಕಾರಣ ರೈಲ್ವೆ ಆಡಳಿತವು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಪಠಾಣ್ ಕೋಟ್ ರೈಲು ನಿಲ್ದಾಣದಲ್ಲಿ ಇಳಿಯುವ ಮುನ್ನ ಚಾಲಕ ಹ್ಯಾಂಡ್‌ಬ್ರೇಕ್ ಹಾಕಲು ಮರೆತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದರಿಂದ ರೈಲು ನಿಧಾನವಾಗಿ ಚಲಿಸತೊಡಗಿದೆ.

ಚಾಲಕರಿಲ್ಲದೆ ಹಳಿಗಳ ಮೇಲೆ ಚಲಿಸಲು ಆರಂಭಿಸಿದ ರೈಲು ಐದು ನಿಲ್ದಾಣಗಳನ್ನು ದಾಟಿದೆ. ಬಳಿಕ ಉಚ್ಚಿ ಬಸ್ಸಿಯಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಮರದ ತುಂಡನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲೋಕೋ ಪೈಲಟ್ ಇಲ್ಲದೆ ರೈಲು ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!