Saturday, April 1, 2023

Latest Posts

ಮನ್‌ಕಿಬಾತ್ 100ನೇ ಎಪಿಸೋಡ್: ಲೋಗೋ, ಜಿಂಗಲ್ ಮಾಡಲು ಸಾರ್ವಜನಿಕರಿಗೆ ಆಹ್ವಾನ, ನಗದು ಬಹುಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ 100ನೇ ಆವೃತ್ತಿ ತಲುಪಲಿದೆ. ಇದಕ್ಕಾಗಿ ಆಕಾಶವಾಣಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಂಗಲ್ ಹಾಗೂ ಲೋಗೋ ತಯಾರಿಸಲು ಸಾರ್ವಜನಿಕರಿಗೆ ಆಹ್ವಾನ ನೀಡಿದೆ.

ಏಪ್ರಿಲ್‌ನ ಕೊನೆಯ ಭಾನುವಾರ 100ನೇ ಆವೃತ್ತಿ ನಡೆಯಲಿದ್ದು, ಇದಕ್ಕಾಗಿ ಸಾರ್ವಜನಿಕರು ಆಕರ್ಷಕ ಲೋಗೊ ಹಾಗೂ ಜಿಂಗಲ್ ತಯಾರಿಸಿ ನಗದು ಬಹುಮಾನ ಪಡೆಯಬಹುದಾಗಿದೆ. ಲೋಗೋ ಹಾಗೂ ಜಿಂಗಲ್ ತಯಾರಿಸಲು ಇರುವ ನಿಯಮಗಳ ಬಗ್ಗೆ ಆಲ್ ಇಂಡಿಯಾ ರೇಡಿಯೋ ಟ್ವೀಟ್ ಮಾಡಿದೆ. ಆಯ್ಕೆಯಾದ ಲೋಗೋ ತಯಾರಕರಿಗೆ 1 ಲಕ್ಷ ರೂಪಾಯಿ ಹಾಗೂ ಆಯ್ಕೆಯಾದ ಜಿಂಗಲ್ ತಯಾರಕರಿಗೆ 11 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!