“ಲೋಕ” ಚುನಾವಣಾ ರಂಗು: ‘ಕೈ’ ಶಾಸಕರು, ಮುಖಂಡರಿಗೆ ಖರ್ಗೆ ನಯಾ ಟಾಸ್ಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

 

ಲೋಕಸಭೆ ಚುನಾವಣೆ ಹಿನ್ನೆಲೆ ಎರಡೂ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿದ್ದು, ಈ ಬಾರಿ ಕಲಬುರಗಿಯಲ್ಲಿ ಸೋಲಿಲ್ಲದ ಸರದಾರ ಎಂದೇ ಬಿಂಬಿತವಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಸೋಲಿಸಲು ಜಾತಿವಾರು ಮತಗಳನ್ನು ಕ್ರೋಢೀಕರಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಹೌದು, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲ್ಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಆಯಾ‌ ಸಮಾಜದ ಶಾಸಕರು ಮತ್ತು ಮುಖಂಡರುಗಳಿಗೆ ಜಾತಿ ಮತಗಳನ್ನ ಹಾಕಿಸಲು ಟಾಸ್ಕ್ ನೀಡಿದೆ.

ಈ ಬಾರಿ ಎಲ್ಲಾ ಸಮುದಾಯಗಳ ಧ್ವನಿಯನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಳಿಯ ರಾಧಾಕೃಷ್ಣ ಅವರಿಗೆ ಕ್ಷೇತ್ರವನ್ನು ಹಸ್ತಾಂತರಿಸಿದರೂ, ಕಳೆದುಕೊಂಡಿರುವ ಸ್ಥಾನವನ್ನು ಮರಳಿ ಪಡೆಯುವ ಹೊಣೆಯನ್ನು ಸಮುದಾಯಕ್ಕೆ ವಹಿಸಲಾಗಿದ್ದು, ಅದು ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!