ಲೋಕಸಭಾ ಚುನಾವಣೆ | ಮತದಾನ ಮಾಡಿದ ಶಾಸಕ ಶಿವರಾಮ ಹೆಬ್ಬಾರ್

ಹೊಸದಿಗಂತ ವರದಿ, ಯಲ್ಲಾಪುರ :

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಇಡಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಬೈಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನ ಸಾಮಾನ್ಯರಂತೆ ಸರತಿಯಲ್ಲಿ ನಿಂತು ಮತಚಲಾಯಿಸಿದರು.

ಈ ಸಂದರ್ಭ ಶಾಸಕರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಜೊತೆಗಿದ್ದರು.

ನಂತರ ಮಾತನಾಡಿ ಬಿಜೆಪಿ ಶಾಸಕನಾಗಿ ಮತ ಚಲಾಯಿಸಿದ್ದೇನೆ . ಯಾರಿಗೆ ಬೆಂಬಲ ಅಂತಾ ಹೇಳಿದರೆ ಗೌಪ್ಯ ಮತದಾನಕ್ಕೆ ಅರ್ಥವಿರುವದಿಲ್ಲ . ಎಂದರಲ್ಲದೆ ಚುನಾವಣಾ ಆಯೋಗಕ್ಕೆ ನಮ್ಮ ಒಂದು ಬೇಡಿಕೆಯೆಂದರೆ ಮೂರು ತಿಂಗಳು ಈ ರೀತಿ ನೀತಿಸಂಹಿತೆ ಇರುವದರಿಂದ ಬಹಳ ದೊಡ್ಡ ಪ್ರಮಾಣ ದಲ್ಲಿ ಅಭಿವೃದ್ಧಿ ಗೆ,ಕುಡಿಯುವ ನೀರಿನ ತೊಂದರೆಯಾಗಿದ್ದರೂ ಯಾವದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ ವಾಗಿಲ್ಲ. ಇಲ್ಲಿ ಮಲೆನಾಡು ಆಗಿರುವದರಿಂದ 5ತಿಂಗಳು ಸತತವಾಗಿ ಮಳೆ ಕಾರಣ ಜೂನ್ ನಂತರ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ ವಾಗುವದಿಲ್ಲ.ಇದೀಗ ಕರ್ನಾಟಕ ದಲ್ಲಿ ಎರಡು ಹಂತದ ಎಲ್ಲ ಚುನಾವಣೆ ಗಳು ಮುಕ್ತಾಯ ಗೊಂಡಿದೆ . ಇದನ್ನು ವಿಶೇಷ ಪ್ರಸಂಗ ಅಂತ ಪರಿಗಣಿಸಿ ಇನ್ನಾದರೂ ಈಗಲಾದರೂ ನೀತಿಸಂಹಿತೆಯನ್ನು ಸಡಿಲಿಸಿ ಅಭಿವೃದ್ಧಿ ಕಾರ್ಯ ಮಾಡಲು ನೀತಿ ಸಂಹಿತೆ ತೊಡಕಾಗದಂತೆ ವಿನಾಯಿತಿ ಕೊಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!