ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಲೋಕಸಭಾ ಚುನಾವಣೆ ಟಿಕೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2024ರ ಲೋಕಸಭಾ ಚುನಾವಣೆಗೆಕೆಲ ಸಿನಿಮಾ ತಾರೆಯರಿಗೆ ವಿವಿಧ ಪಕ್ಷಗಳು ಟಿಕೆಟ್ ನೀಡಿದ್ದು, ಇದರ ನಡುವೆ ಸದ್ದಿಲ್ಲದೆ ಊರ್ವಶಿ ರೌಟೇಲಾ ಚುನಾವಣಾ ಟಿಕೆಟ್ ಪಡೆದುಕೊಂಡಿದ್ದಾರೆ.

ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಲಾಗಿದೆ. ಈ ಸ್ಫೋಟಕ ಮಾತನ್ನು ಖುದ್ದು ಊರ್ವಶಿ ಬಹಿರಂಗಪಡಿಸುವ ಮೂಲಕ ಅಬಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಊರ್ವಶಿಗೆ ಚುನಾವಣೆ ಆಸಕ್ತಿ ಕುರಿತು ಪ್ರಶ್ನಿಸಿದಾಗ . ನನಗೆ ಈಗಾಗಲೇ ಲೋಕಸಭಾ ಚುನಾವಣಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ ಎಂದಿದ್ದಾರೆ.

ಟಿಕೆಟ್ ಸಿಕ್ಕಿದೆ. ಆದರೆ ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೋ , ಬೇಡವೇ? ಅನ್ನೋದು ನಿರ್ಧರಿಸಿಲ್ಲ. ಈ ಕುರಿತು ನನಗೆ ಕೆಲ ಗೊಂದಲಗಳಿವೆ ಎಂದು ರೌಟೇಲಾ ಹೇಳಿದ್ದಾರೆ.

ಇತ್ತ ಈ ಮಾತು ಕೇಳಿ ನೆಟ್ಟಿಗರು, ರಾಜಕೀಯ ಬೇಡವೇ ಬೇಡ, ಸಿನಿಮಾ ಕಡೆ ಗಮನಕೇಂದ್ರಿಕರಿಸಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಯಾವುದೇ ಭವಿಷ್ಯ ಇಲ್ಲ ಎಂದು ಅರಿತ ಊರ್ವಶಿ ಇದೀಗ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ಮುಂದಾಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಊರ್ವಶಿಗೆ ಟಿಕೆಟ್ ನೀಡಿದ ಪಕ್ಷ ಯಾವುದು? ಯಾವ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಅನ್ನೋ ಮಾಹಿತಿಗಳನ್ನು ಊರ್ವಶಿ ಬಹಿರಂಗಪಡಿಸಿಲ್ಲ. ಆದರೆ ಊರ್ವಶಿ ನೀಡಿದ ಈ ಹೇಳಿಕೆ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!