ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಸೋಮವಾರ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 10.35ರಷ್ಟು ಮತದಾನವಾಗಿದೆ ಎಂದ ತಿಳಿದುಬಂದಿದೆ,
10 ರಾಜ್ಯಗಳ 96 ಲೋಕಸಭಾ ಕ್ಷೇತ್ರ, ಆಂಧ್ರಪ್ರದೇಶ ವಿಧಾನಸಭೆಯ ಎಲ್ಲಾ 175 ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 28 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವರೆಗೂ ಶ.10.35ರಷ್ಟು ಮತದಾನವಾಗಿದೆ.
ಆಂಧ್ರ ಪ್ರದೇಶ: ಶೇ.9.05, ಬಿಹಾರ: ಶೇ.10.18, ಜಮ್ಮು ಮತ್ತು ಕಾಶ್ಮೀರ: ಶೇ.5.07, ಜಾರ್ಖಂಡ್: ಶೇ.11.78, ಮಧ್ಯಪ್ರದೇಶ: ಶೇ.14.97, ಮಹಾರಾಷ್ಟ್ರ: ಶೇ.6.45, ಒಡಿಶಾ: ಶೇ.9.23, ತೆಲಂಗಾಣ: ಶೇ.9.51, ಉತ್ತರ ಪ್ರದೇಶ: ಶೇ.11.67, ಪಶ್ಚಿಮ ಬಂಗಾಳ: ಶೇ.15.24