ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಿಗೇ ರಾಜಕೀಯ ಪಕ್ಷಗಳಲ್ಲಿ ಮಿಂಚಿನ ಸಂಚಲನ ಕಂಡುಬರುತ್ತಿದ್ದು, ಪ್ರಚಾರ ಕಾರ್ಯಗಳಿಗಾಗಿ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಏಕಾಏಕಿ ಹೆಚ್ಚುತ್ತಿದೆ.
ಮಿಂಚಿನ ವೇಗದ ಪ್ರಚಾರ ಕಾರ್ಯಗಳಿಗಾಗಿ ಪಕ್ಷಗಳು ಹೆಲಿಕಾಪ್ಟರ್‌ನ ಮೊರೆಹೋಗುತ್ತಿದ್ದು, ಮೂರರಿಂದ 11 ಆಸನಗಳ ಸಾಮರ್ಥ್ಯದ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಪೈಕಿ ಡಬಲ್ ಎಂಜಿನ್‌ಗಳ ಹೆಲಿಕಾಪ್ಟರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದೆ.
ಪ್ರಸ್ತುತ ದೇಶದಲ್ಲಿ, ನಾಗರಿಕ ಯಾನ ಉದ್ದೇಶಕ್ಕಾಗಿ 250 ನೋಂದಾಯಿತ ಸಂಸ್ಥೆಗಳು ಹೆಲಿಕಾಪ್ಟರ್ ಸೇವೆ ಒದಗಿಸುತ್ತಿವೆ. ಈ ಪೈಕಿ ಪೂರ್ವ ನಿಗದಿತವಲ್ಲದ ಹೆಲಿಕಾಪ್ಟರ್ ಸೇವೆ ಒದಗಿಸುವ ಸಂಸ್ಥೆಗಳ ಸಂಖ್ಯೆ 181. ಇವುಗಳಲ್ಲಿ ಸರ್ಕಾರಿ, ಸಾರ್ವಜನಿಕ ವಲಯದ ಕಂಪನಿಗಳು 26 ಆಗಿವೆ. ಈ ಬಾರಿ ಚುನಾವಣೆ ಸಂದರ್ಭ 70 ರಿಂದ 100 ಹೆಲಿಕಾಪ್ಟರ್‌ಗಳು ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದ್ದು, ಹೀಗಾಗಿ ಈಗಾಗಲೇ ಬೇಡಿಕೆ ಹೆಚ್ಚಳವಾಗುತ್ತಿದೆ.