ಮಹಾರಾಷ್ಟ್ರದಲ್ಲಿ ಒಂದೇ ದಿನ, 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ಮಹಾರಾಷ್ಟ್ರದಲ್ಲಿ 10 ನಿಮಿಷಗಳ ಅವಧಿಯಲ್ಲಿ ಎರಡು ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಹಿಂಗೋಲಿ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ 10 ನಿಮಿಷಗಳಲ್ಲಿ 4.5 ಮತ್ತು 3.6 ಅಳತೆಯ ಭೂಕಂಪಗಳು ದಾಖಲಾಗಿವೆ. ಇದು ನಗರದಿಂದ 10 ಕಿಮೀ ದೂರದಲ್ಲಿ ನಡೆದಿದೆ. ಬೆಳಗ್ಗೆ 6:19ರ ಸುಮಾರಿಗೆ ಎರಡನೇ ಭೂಕಂಪದ ಅನುಭವವಾಗಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2 ರಷ್ಟಿತ್ತು. ಈ ಭೂಕಂಪದ ಕೇಂದ್ರಬಿಂದು ಹಿಂಗೋಲಿ ಜಿಲ್ಲೆಯ ಅಖಾರ ಬಾಲಾಪುರ ಮತ್ತು ಹಿಂಗೋಲಿ ಪರ್ಭಾನಿ ನಾಂದೇಡ್ ಜಿಲ್ಲೆಯ ಎಲ್ಲಾ ಮೂರು ಗ್ರಾಮಗಳು ಈ ಭೂಕಂಪದ ತೀವ್ರತೆಯನ್ನು ಅನುಭವಿಸಿದೆ. ಹಲವೆಡೆ ಮನೆಗಳ ಗೋಡೆಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ.

ಭೂಕಂಪದ ಪರಿಣಾಮವಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ಮರಾಠವಾಡದ ನಾಂದೇಡ್, ಪರ್ಭಾನಿ, ಹಿಂಗೋಲಿ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ಭೂಕಂಪದ ಅನುಭವವಾಗಿದೆ. ಹಲವರು ಭಯಭೀತರಾಗಿ ಮನೆ ತೊರೆದಿದ್ದಾರೆ. ನಾಂದೇಡ್‌ನ ಉತ್ತರ ಭಾಗದಲ್ಲಿ ಭೂಕಂಪದ ಅನುಭವವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!