ಲೋಕಸಭೆ ಚುನಾವಣೆ: ನಾಳೆ ನಡೆಯಲಿದೆ 4ನೇ ಹಂತದ ಮತದಾನ, ಕಣದಲ್ಲಿದ್ದಾರೆ ಘಟಾನುಘಟಿ ನಾಯಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಾಳೆ (ಮೀ ೧೩ ) ನಡೆಯಲಿದೆ. ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಒಟ್ಟು 9 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ 96 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಕಣದಲ್ಲಿ 1717 ಅಭ್ಯರ್ಥಿಗಳು ಉಳಿದಿದ್ದು, ಎಲ್ಲರ ಹಣೆಬರಹವನ್ನು ಮತದಾರ ಸೋಮವಾರ ಬರೆಯಲಿದ್ದಾನೆ. ಇದರಲ್ಲಿ 1547 ಪುರುಷ, 170 ಮಹಿಳಾ ಅಭ್ಯರ್ಥಿಗಳಿದ್ದಾರೆ.

4ನೇ ಹಂತದ ಮತದಾನದಲ್ಲಿ ಕಣದಲ್ಲಿ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯು ಸುಬ್ರತ್​ ಪಾಠಕ್​ ಅವರನ್ನು ಕಣಕ್ಕಿಳಿಸಿದೆ.

ಪಶ್ಚಿಮಬಂಗಾಳ ಕಾಂಗ್ರೆಸ್​ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ಬಹರಂಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಇವರ ವಿರುದ್ಧ ಟಿಎಂಸಿಯು ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯ ನಿರ್ಮಲ್ ಚಂದ್ರ ಸಹಾ ಕೂಡ ಎದುರಾಳಿಯಾಗಿದ್ದಾರೆ.

ಮಹುವಾ ಮೊಯಿತ್ರಾ, ಕೃಷ್ಣನಗರ: ಸಂಸತ್​ನಲ್ಲಿ ಪ್ರಶ್ನೆಗಾಗಿ ಹಣ ಪಡೆದ ಆರೋಪ ಹೊತ್ತಿರುವ ಸಂಸದೆ ಮಹುವಾ ಮೊಯಿತ್ರಾ ಅವರು ಕೃಷ್ಣನಗರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಟಿಎಂಸಿ ನಾಯಕಿ ವಿರುದ್ಧ ರಾಜ ಕುಟುಂಬದ ಅಮೃತಾ ರಾಯ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

4ನೇ ಹಂತದಲ್ಲಿ ಗಮನಸೆಳೆದ ಕ್ಷೇತ್ರಗಳಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರವೂ ಒಂದು. 2004 ರಿಂದ ಅಸಾದುದ್ದೀನ್ ಓವೈಸಿ ಇಲ್ಲಿಂದ ಗೆದ್ದು ಬರುತ್ತಿದ್ದಾರೆ. ಅದಕ್ಕೂ ಮೊದಲು ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 1984 ರಿಂದ ಪ್ರತಿನಿಧಿಸಿದ್ದರು. ಬಿಜೆಪಿಯಿಂದ ಸಾಮಾಜಿಕ ಕಾರ್ಯಕರ್ತೆ, ಪ್ರಖರ ಹಿಂದುವಾದಿ ಮಾಧವಿ ಲತಾ ಅವರು ಕಣಕ್ಕಿಳಿದಿದ್ದಾರೆ.

ಮಾಜಿ ಸಿಎಂ ವೈಎಸ್ ರಾಜಶೇಖರ್​ ರೆಡ್ಡಿ ಅವರ ಕುಟುಂಬದ ವೈಎಸ್​ ಶರ್ಮಿಳಾ ಕಡಪ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ. ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯಾಗಿರುವ ಶರ್ಮಿಳಾ ರೆಡ್ಡಿ, ವೈಎಸ್‌ಆರ್‌ಸಿಪಿ ಸಂಸದ ವೈಎಸ್ ಅವಿನಾಶ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!