ಹೊಸದಿಗಂತ ವರದಿ, ವಿಜಯಪುರ:
ಸಾರಿಗೆ ಬಸ್- ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಗರ ಹೊರ ವಲಯದ ಅಲ್- ಅಮೀನ್ ಮೆಡಿಕಲ್ ಕಾಲೇಜ್ ಎದುರಿನ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ತಿಕೋಟಾದ ವಿಶಾಲ ಬಾಲಕೃಷ್ಣ ಶಿಂಧೆ (22), ರಮೇಶ ಪ್ರಕಾಶ ಮಾಶ್ಯಾಳ (20) ಎಂದು ಗುರುತಿಸಲಾಗಿದೆ.
ವಿಶಾಲ ಶಿಂಧೆ ಹಾಗೂ ರಮೇಶ ಮಾಶ್ಯಾಳ ಈ ಇಬ್ಬರು ಸ್ಕೂಟರ್ ಮೇಲೆ ತಿಕೋಟಾ ಕಡೆಗೆ ತೆರಳುತ್ತಿದ್ದಾಗ, ಎದುರಿಗೆ ಬಂದ ಸಾರಿಗೆ ಮಧ್ಯೆ ಅಪಘಾತ ಸಂಭವಿಸಿದೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.