ಲೋಕಸಮರ; ಅಭ್ಯರ್ಥಿ ಅರಿಯಲು ಹೊಸ ಅಪ್ಲಿಕೇಶನ್!

  • ಮಹಾಂತೇಶ ಕಣವಿ

ಧಾರವಾಡ: ಲೋಕಸಭಾ ಚುನಾವಣಾ ಕಾವು ರಂಗೇರಿದ ಹೊತ್ತಿನಲ್ಲಿ ಆಯೋಗ ಅಭ್ಯರ್ಥಿ ಅಪರಾಧ, ಕ್ರಿಮಿನಲ್ ಹಿನ್ನಲೆಗಳು ಹಾಗೂ ಪೂರ್ವಾಪರ ತಿಳಿಸುವ ಕೆವೈಸಿ(ಏಟಿoತಿ ಂbouಣ ಅಚಿಟಿಜiಜಚಿಣes-ಏಙಅ) ಅಪ್ಲಿಕೇಶನ್ ಬಿಡುಗಡೆ ಮಾಡಿದೆ.

ಹೌದು, ಚುನಾವಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಉತ್ತೇಜಿಸಲು ಹಾಗೂ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧದ ಪೂರ್ವಾಪರ ತಿಳಿಯಲು ಚುನಾವಣಾ ಆಯೋಗ ಈ ಅಪ್ಲಿಕೇಶನ್ ಪರಿಚಯಿಸಿದೆ. ಇದು ನಾಗರಿಕರಿಗೆ ಉಪಯುಕ್ತ ಸಾಧನ.

ಚುನಾವಣಾ ಕಣದ ಅಭ್ಯರ್ಥಿ ಬಗ್ಗೆ ಗೊತ್ತಿಲ್ಲದ ಕೆಲವು ಜನರು ಮತದಾನದಿಂದ ದೂರವೇ ಉಳಿಯುತ್ತಾರೆ. ಹೀಗಾಗಿ ಅಭ್ಯರ್ಥಿಗಳ ಪೂರ್ವಾಪರ ತಿಳಿಯುವ, ಯಾರಿಗೆ ಮತ ನೀಡಬೇಕು ಎಂಬುದು ಈ ಮೊಬೈಲ್ ಅಪ್ಲಿಕೇಶನ್ ಸಹಾಯ ಮಾಡಲಿದೆ.

ಈ ಅಪ್ಲಿಕೇಶನ್‌ಗೆ ‘ನೋ ಯುವರ್ ಕ್ಯಾಂಡಿಡೇಟ್’ ಅಥವಾ ‘ಕೆವೈಸಿ’ ಎಂಬ ಹೆಸರಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಪ್ಲಾಟ್‌ಪಾರ್ಮ್ಗಳಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಕ್ಷೇತ್ರದ ಅಭ್ಯರ್ಥಿ ಹಿನ್ನಲೆ ತಿಳಿಯಬಹುದು.

ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಅಪರಾಧ ದಾಖಲೆಗಳು, ಅವರ ಆಸ್ತಿ, ಸಾಲದ ವಿವರ ತಿಳಿಯುವ ಹಕ್ಕು ಹೊಂದಿದ್ದು, ಈ ಅಪ್ಲಿಕೇಶನ್ ಮೂಲಕ ಕ್ರಿಮಿನಲ್ ಹಿನ್ನಲೆ ಅಭ್ಯರ್ಥಿಗಳ ಆಸ್ತಿ ಹಾಗೂ ಸಾಲದ ಮಾಹಿತಿ ಸಹ ಮತದಾರರು ಪರಿಶೀಲಿಸಬಹುದು.

ಕ್ರಿಮಿನಲ್ ಅಪರಾಧ ಅಭ್ಯರ್ಥಿಗಳ ಕಣಕ್ಕಿಳಿಸುವ ಪಕ್ಷಗಳು ಈ ನಿರ್ಧಾರದ ಹಿಂದಿನ ತಾರ್ಕಿಕತೆ ವಿವರಿಸಬೇಕು. ಅಲ್ಲದೇ, ಕ್ರಿಮಿನಲ್ ಹಿನ್ನಲೆ ಎಲ್ಲ ಮಾಹಿತಿ ಬಹಿರಂಗಪಡಿಸುವ ಜತೆಗೆ ಮೂರು ಬಾರಿ ದೂರದರ್ಶನ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಬೇಕು.

ಕೆವೈಸಿ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ಚುನಾವಣಾ ಆಯೋಗವೂ ತನ್ನ ವೆಬ್‌ಸೈಟ್‌ನಲ್ಲೂ ಪೋಸ್ಟ್ ಮಾಡಿದೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಕ್ಯೂಆರ್ ಕೋಡ್ ನೀಡಿದೆ.

ಮತದಾರರು ಚುನಾವಣೆಯಿಂದ ದೂರ ಉಳಿಯದೆ, ಈ ಹೊಸ ಅಪ್ಲಿಕೇಶನ್ ಮೂಲಕ ತಮ್ಮ ಕ್ಷೇತ್ರದ ಅಭ್ಯರ್ಥಿ ಪೂರ್ವಾಪರ ಅರಿಯುವುದರ ಜೊತೆ ತಮ್ಮ ಮತ ಯಾರಿಗೆ? ಎಂಬ ನಿರ್ಧಾರ ಕೈಗೊಂಡು, ಪ್ರಜ್ಞಾಪ್ರಭುತ್ವದ ಗಟ್ಟಿಗೊಳಿಸಲು ಸಹಕರಿಸಬೇಕಿದೆ.

ಅಪರಾಧ ಚಟವಟಿಕೆ ಇತಿಹಾಸ ಹೊಂದಿದ ಅಭ್ಯರ್ಥಿಗಳ ಗುರುತಿಸಲು ಹೊಸ ಅಪ್ಲಿಕೇಶನ್ ಪರಿಚಯಿಸಿದೆ. ಇದು ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಉತ್ತೇಜಿಸುವ ಪ್ರಮುಖ ಪ್ರಮುಖ ಉದ್ದೇಶ ಹೊದಿದೆ ಎ‌ಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!