ಹೊಸದಿಗಂತ ವರದಿ ಹಾವೇರಿ:
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಿರೇಕೆರೂರ ಉಪವಿಭಾಗದ ಎಇ ಕಾಂತೇಶ್ ಭಜಂತ್ರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದರು.
ಕಾಂತೇಶ್ ಭಜಂತ್ರಿ ಹಿರೇಕೇರೂರು ಉಪವಿಭಾಗ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು
ಹಾವೇರಿ ನಗರದ ಕಾಂತೇಶ್ ಭಜಂತ್ರಿಗೆ ಸೇರಿದ ಎರಡು ಮನೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತರ ದಾಳಿ ನಡೆಯುತ್ತಿದ್ದಂತೆಯೇ ಅಧಿಕಾರಿ ಕಾಶೀನಾಥ್ ಭಜಂತ್ರಿ ಮನೆಯಲ್ಲಿ ಹೈಡ್ರಾಮಾ ನಡೆಯಿತು. 9 ಲಕ್ಷ ರೂಪಾಯಿ ಹಣ ಗಂಟು ಕಟ್ಟಿ ಕಿಡಿಕಿ ಮೂಲಕ ಹೊರಗೆ ಬೀಸಾಡಿದ್ದರು. ಅಲ್ಲದೇ ಕಾಶಿನಾಥ್ ಭಜಂತ್ರಿ ತಮ್ಮ ಹಾಸಿಗೆಯಲ್ಲಿ ಸುತ್ತಿ ಇಟ್ಟಿದ್ದ 2 ಲಕ್ಷ ರೂಪಾಯಿ ನಗದು ಸಹ ಪತ್ತೆಯಾಗಿದೆ.
ಹಾವೇರಿ ನಗರದ ಬಸವೇಶ್ವರ ನಗರದ 1 ನೇ ಕ್ರಾಸ್ ನಲ್ಲಿರುವ ಕಾಶೀನಾಥ್ ಭಜಂತ್ರಿ ನಿವಾಸದಲ್ಲಿರುವ ಕಡತಗಳು, ದಾಖಲೆಗಳ ಪರಿಶೀಲನೆಯನ್ನು ಲೋಕಾಯುಕ್ತ ಪೊಲೀಸರಿಂದ ಮುಂದುವರೆಸಿದ್ದಾರೆ.
ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ಮೇಲೂ ಲೋಕಾ ರೈಡ್ ನಡೆದಿದ್ದು, ಹಾವೇರಿ ನಗರದಲ್ಲಿರುವ ಶ್ರೀನಿವಾಸ್ ಆಲದರ್ತಿ ನಿವಾಸದಲ್ಲಿ ಪರಿಶೀಲನೆ ನಡೆದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.