July 10, 2026
Friday, July 10, 2026
spot_img

ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ-ನಿವಾಸಗಳಿಗೆ ‘ಲೋಕಾ’ ದಾಳಿ

ಹೊಸದಿಗಂತ ವರದಿ ​ಕುಶಾಲನಗರ:

ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ ಹಾಗೂ ನಿವಾಸಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ಹೇಳಲಾಗಿದೆ.

ಮಂಗಳವಾರ ಬೆಳಗ್ಗೆ ಹಾಸನದ ವಿದ್ಯಾನಗರದಲ್ಲಿರುವ ಪುಟ್ಟಸ್ವಾಮಿ ಅವರ ಸ್ವಂತ ಮನೆ, ಮೈಸೂರಿನ ತಿಲಕ ನಗರದಲ್ಲಿರುವ ಬಾಡಿಗೆ ಮನೆ, ಹಾರಂಗಿಯ ಅಣೆಕಟ್ಟೆ ಕಚೇರಿ, ಕುಶಾಲನಗರದ ವಿಭಾಗೀಯ ಕಚೇರಿಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !