ರಾಜ್ಯದ 6 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ :ಬರೋಬ್ಬರಿ 51 ಕೋಟಿ ರೂ. ಸ್ಥಿರ, ಚರಾಸ್ತಿ ಪತ್ತೆ!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಆರು ಅಧಿಕಾರಿಗಳ ಮೇಲೆ (Six corrupt officers) ಮಂಗಳವಾರ ಲೋಕಾಯುಕ್ತ ದಾಳಿ ನಡೆಸಿದ್ದು, ರಾಜ್ಯಾದ್ಯಂತ ಸುಮಾರು 30 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ (Lokayukta officers) ಮಾಡಿದ್ದು, ಕೋಟ್ಯಂತರ ರೂ. ನಗದು, ರಾಶಿ ರಾಶಿ ಚಿನ್ನಾಭರಣ ಮತ್ತು ದುಬಾರಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟು ಆರು ಜನರಿಂದ 51.11 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಬಳ್ಳಾರಿ,‌ ಚಿತ್ರದುರ್ಗ, ರಾಮನಗರ, ಬೆಂಗಳೂರಿನಲ್ಲಿ ಈ ದಾಳಿಗಳು ನಡೆದಿವೆ.

ಯಾರ ಬಳಿ ಎಷ್ಟು ಆಸ್ತಿ ಸಿಕ್ಕಿದೆ?
1.ಎಂ.ಎಲ್.ನಾಗರಾಜ್, ಚೀಫ್ ಜನರಲ್ ಮ್ಯಾನೇಜರ್, ಬೆಸ್ಕಾಂ, ಬೆಂಗಳೂರು (6.37 ಕೋಟಿ ರೂ. ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆ)
2.ಡಿ.ಎಂ.ಪದ್ಮನಾಭ, PDO, ಕುಂದಾಣ, ದೇವನಹಳ್ಳಿ, (5.98 ಕೋಟಿ ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆ)
3. ಎನ್.ಸತೀಶ್ ಬಾಬು, PWD ಎಂಜಿನಿಯರ್, ಬೆಂಗಳೂರು. ( 4.52 ಕೋಟಿ ರೂ. ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆ)
4.ಸೈಯದ್ ಮುನೀರ್ ಅಹಮದ್, AEE, KRIDL,KRIDL, ರಾಮನಗರ. (5.48 ಕೋಟಿ ರೂ. ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆ)
5. ಹೆಚ್.ಎಸ್.ಸುರೇಶ್, ಗ್ರಾ.ಪಂ ಸದಸ್ಯ, ಚನ್ನೇನಹಳ್ಳಿ, ಬೆಂಗಳೂರು ದಕ್ಷಿಣ (25.58 ಕೋಟಿ ರೂ. ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆ)
6. ಬಿ.ಮಂಜೇಶ್, ಜಂಟಿ ನಿರ್ದೇಶಕ, ನಗರ ಯೋಜನೆ, ಆನೇಕಲ್ (3.18 ಕೋಟಿ ರೂ. ಮೌಲ್ಯದ ಸ್ಥಿರ & ಚರ ಆಸ್ತಿ ಪತ್ತೆ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!