ಹೊಸದಿಗಂತ ವರದಿ ಕುಶಾಲನಗರ:
ಭ್ರಷ್ಟ ಅಧಿಕಾರಿ-ಸಿಬ್ಬಂದಿಗಳ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ ಕುಶಾಲನಗರದಲ್ಲಿ ಓರ್ವನನ್ನು ಬಲೆಗೆ ಕೆಡವಿದ್ದಾರೆ.
ಕೊಡಗು ಜಿಲ್ಲಾ ಪಂಚಾಯತ್ನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಗುಮಾಸ್ತ ಅಬ್ದುಲ್ ಬಶೀರ್ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ಸುಮಾರು 14ಲಕ್ಷ ರೂ.ನಗದು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಕುಶಾಲನಗರದ ಗೊಂದಿಬಸವನಹಳ್ಳಿ ನಿವಾಸಿಯಾಗಿರುವ ಅಬ್ದುಲ್ ಬಶೀರ್ ಆದಾಯ ಮೀರಿ ಆಸ್ತಿ ಗಳಿಸಿರುವ ಬಗ್ಗೆ ಸುಳಿವು ದೊರೆತ ಬಳಿಕ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದರು.
ಮೊದಲ ಹಂತದಲ್ಲೇ ಮನೆಯಲ್ಲಿ 14 ಲಕ್ಷ ರೂ.ನಗದು ದೊರಕಿರುವುದಾಗಿ ಹೇಳಲಾಗಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.