Sunday, February 5, 2023

Latest Posts

ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಲೋಕಾಯುಕ್ತ ಎಸ್ಪಿ,ಡಿಎಸ್ಪಿ ಧಿಡೀರ್ ಭೇಟಿ

ಹೊಸದಿಗಂತ ವರದಿ, ಕಲಬುರಗಿ:

ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ಔಷಧಿ ಕೊರತೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಎ.ಆರ್.ಕನೂ೯ಲ್ ಹಾಗೂ ಡಿ.ಎಸ್.ಪಿ.ಎಸ್.ಆರ್ ಪಾಟೀಲ್ ಅವರು ಗುರುವಾರ ಸಂಜೆ ಧಿಡೀರನೇ ಆಸ್ಪತ್ರೆಗೆ ಭೇಟಿ ನೀಡಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಪ೯ಕ ಚಿಕಿತ್ಸೆ, ಔಷಧಿ ಲಭ್ಯತೆ ಬಗ್ಗೆ ಜಂಟಿ ಪರೀಶಿಲನೆ ನಡೆಸಿದರು. ಇದೇ ವೇಳೆ ಸಕಾ೯ರಿ ಜಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಕಂಡು ಎಸ್ಪಿ ಗರಂ ಆಗಿದ್ದು ಕಂಡು ಬಂದಿದೆ.

ಜಿಮ್ಸ್ ಆಸ್ಪತ್ರೆ ನಿದೇ೯ಶಕಿ ಕವಿತಾ ಪಾಟೀಲ್, ಜಿಲ್ಲಾ ವೈದ್ಯಾಧಿಕಾರಿ ಡಾ.ಅಂಬಾರಾಯ್ ರುದ್ರವಾಡಿಗೆ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸ್ವಚ್ಛತೆ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!