ಲಂಡನ್‌ನ ನೀರವ್ ಮೋದಿ ಐಷಾರಾಮಿ ಅಪಾರ್ಟ್‌ಮೆಂಟ್ ಮಾರಾಟಕ್ಕೆ ಲಂಡನ್ ಹೈಕೋರ್ಟ್ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ಲಂಡನ್‌ನ ಐಷಾರಾಮಿ ಅಪಾರ್ಟ್‌ಮೆಂಟ್ ಮಾರಾಟಕ್ಕೆ ಲಂಡನ್ ಹೈಕೋರ್ಟ್ ಅನುಮತಿ ನೀಡಿದೆ.

ಈ ಅಪಾರ್ಟ್‌ಮೆಂಟನ್ನು 5.25 ಮಿಲಿಯನ್ ಪೌಂಡ್‌ಗೆ ಮಾರಾಟ ಮಾಡಬಹುದು ಎಂದು ಹೈಕೋರ್ಟ್ ತಿಳಿಸಿದೆ.

ವಿಚಾರಣೆಗೆ ಆಗ್ನೇಯ ಲಂಡನ್‌ನ ಥೇಮ್ಸೈಡ್ ಜೈಲಿನಿಂದ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಹಾಜರಾಗಿದ್ದು, ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮಾಸ್ಟರ್ ಜೇಮ್ಸ್ ಬ್ರೈಟ್ವೆಲ್, ಆಸ್ತಿಯನ್ನು 5.25 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅನುಮತಿಸುವುದು ಸಮಂಜಸವಾದ ನಿರ್ಧಾರ ಎಂದರು.

ಇದೇ ಸಂದರ್ಭ ಮಾರಾಟದಿಂದ ಬರುವ ಆದಾಯವನ್ನು ಸುರಕ್ಷಿತ ಖಾತೆಯಲ್ಲಿ ಇರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಮಾಡಿದ ಮನವಿಗಳನ್ನು ಕೂಡಾ ಅವರು ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!