ಕಾಂಗ್ರೆಸ್ ನ ರಾಷ್ಟ್ರೀಯ,ರಾಜ್ಯಾಧ್ಯಕ್ಷರ ಮೇಲೆ ಎಷ್ಟು ಕೇಸ್ ಗಳಿವೆ ನೋಡಿಕೊಳ್ಳಿ: ಪ್ರಿಯಾಂಕ್ ಖಗೆ೯ಗೆ ಸಿಎಂ ತಿರುಗೇಟು

ಹೊಸದಿಗಂತ ವರದಿ, ಕಲಬುರಗಿ:

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೂ ಅನೇಕ ಕೇಸ್ ಗಳಿದ್ದು, ನಿಮ್ಮ ಮಾನದಂಡಗಳು ಉಪಯೋಗ ಮಾಡುವುದಾದರೇ ನೀವು ನಿಮ್ಮ ಕಾಂಗ್ರೆಸ್ ಪಕ್ಷವನ್ನು ವಿಸಜ೯ನೆ ಮಾಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖಗೆ೯ಗೆ ತಿರುಗೇಟು ನೀಡಿದರು.

ಶುಕ್ರವಾರ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಆಯೋಜಿಸಿದ್ದ ಬೃಹತ್ ರೋಡ್ ಶೋನಲ್ಲಿ ಖಗೆ೯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಚಿತಾಪುರ ಬಂದಿರುವ ಮೂಲ ಕಾರಣ ನಮ್ಮ ಅಭ್ಯರ್ಥಿ ಮಣಿಕಂಠ್ ರಾಠೋಡ ಅವನನ್ನು ಗೆಲ್ಲಿಸಿಕೊಂಡು ಹೋಗಲು ಬಂದಿದ್ದೇವೆ.ಮಣಿಕಂಠ್ ರಾಠೋಡ್ ಮೇಲೆ ಹಲವು ಕೇಸ್ಗಳಿವೆ ನೀವು ಅವರ ಪರ ಪ್ರಚಾರ ಮಾಡುವುದು ದುರಂತದ ಸಂಗತಿ ಎಂಬ ಹೇಳಿಕೆ ನೀಡುವ ಖಗೆ೯ ಅವರೆ,ನಿಮ್ಮ ನಾಯಕರ ಮೇಲೆ ಎಷ್ಟು ಕೇಸ್ ಗಳಿವೆ ನೋಡಿಕೊಳ್ಳಿ ಎಂದ ಅವರು,ನಿಮ್ಮ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರು ಬೆಲ್ ಮೇಲೆ ಹೊರಗಡೆ ಇದ್ದಾರೆ ಎಂದರು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ವಿಸಜ೯ನೆ ಮಾಡಿ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು.ರಾಷ್ಟ್ರ ಪೀತಾ ಗಾಂಧೀಜಿ ಅವರ ಕನಸು ನನಸು ಮಾಡುವ ಕಾಲ ಈಗ ಕೂಡಿ ಬಂದಿದ್ದು,ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಸರು ಇಲ್ಲದ ಹಾಗೇ ಮಾಡಿ ಎಂದು ಕರೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ,ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕನ ಪುತ್ರನನ್ನು ಈ ಬಾರಿ ಚುನಾವಣೆಯಲ್ಲಿ ಮನೆಗೆ ಕಳಿಸುವ ಅವಶ್ಯಕತೆ ಬಹಳ ಇದ್ದು,ಎಲ್ಲರೂ ಬೂತ್ ಮಟ್ಟದಲ್ಲಿ ಚೆನ್ನಾಗಿ ಮತ ಹಾಕಿಸುವ ಮೂಲಕ ಮಣಿಕಂಠ್ ರಾಠೋಡ ಅವರನ್ನು 25000 ಮತಗಳಿಂದ ಗೆಲ್ಲಿಸಿಕೊಂಡು ಬರಬೇಕೆಂದು ಕರೆ ನೀಡಿದರು.

ಇದಕ್ಕೂ ಮುನ್ನ ಅಕ್ಕಮಹಾದೇವಿ ದೇವಸ್ಥಾನದಿಂದ ರೋಡ್ ಶೋ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಾದ ಹಳೆ ಕಪಡಾ ಬಜಾರ,ಕಿರಾಣ ಬಜಾರ,ಜನತಾ ಚೌಕ,ಭುವನೇಶ್ವರಿ ಚೌಕ,ಡಾ.ಅಂಬೇಡ್ಕರ್ ಚೌಕ, ಬಸ್ ನಿಲ್ದಾಣದಿಂದ ಎಪಿಎಂಸಿ ಎದುರಿನ ಬಸವೇಶ್ವರ ವೃತ್ತದ ವರೆಗೆ ಸಾಗಿತು.

ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜುಗೌಡ್,ನಟಿ ಶೃತಿ,ಮುಕುಂದ ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!