ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರೆಜಿಲ್‌ನಲ್ಲಿ ಈ ವರ್ಷ ನವೆಂಬರ್‌ಗೆ ನಿಗದಿಯಾಗಿರುವ ಪರಿಸರ ಸಮ್ಮೇಳನ (COP)ಕ್ಕಾಗಿ ರಸ್ತೆ ನಿರ್ಮಿಸಲು ಸರ್ಕಾರ ಅಮೆಜಾನ್ ದಟ್ಟಾರಣ್ಯವನ್ನು ನಾಶ ಮಾಡಿದೆ. ಇದು ಅಲ್ಲಿನ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬ್ರೆಜಿಲ್‌ನ ಈಶಾನ್ಯ ಭಾಗದಲ್ಲಿನ ಬೆಲೆಂ ನಗರದಲ್ಲಿ ಸಮ್ಮೇಳನಕ್ಕಾಗಿ ವಿದೇಶಿ ಗಣ್ಯರು ಸೇರಿ 50,000 ಅತಿಥಿಗಳು ಸೇರಲಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಸರ್ಕಾರ ಕಾಡಿನ 13 ಕಿ.ಮೀ.ಗಳಷ್ಟು ದಟ್ಟಾರಣ್ಯವನ್ನು ನಾಶ ಮಾಡಿದೆ.
ಅಮೆಜಾನ್ ಅತಿ ಹೆಚ್ಚು ಕಾರ್ಬನ್ ಗುಣವನ್ನು ಸೆಳೆದುಕೊಳ್ಳುತ್ತಿದ್ದು, ಈಗ ಅರಣ್ಯ ನಾಶದಿಂದ ಕಾರ್ಬನ್ ಪ್ರಮಾಣ ಹೆಚ್ಚಲಿದೆ ಎಂದು ಪರಿಸರವಾದಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ಈ ವಿಧಾನವನ್ನು ‘ಸುಸ್ಥಿರ’ ಎಂದು ಹೇಳಿದೆ.