ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಇಂದು ಸದ್ದಿಲ್ಲದೇ ಹಸೆಮಣೆ ಏರಲಿದ್ದಾರೆ.
ರಂಗಭೂಮಿ ಕಲಾವಿದೆ ಬೃಂದಾ ವಿಕ್ರಮ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ವಾಸುಕಿ ತಯಾರಾಗಿದ್ದಾರೆ. ಬೃಂದಾ ಹಾಗೂ ವಾಸುಕಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೀಗ ಸಿಂಪಲ್ ಆಗಿ ಮದುವೆಯಾಗಲಿದ್ದಾರೆ.
ತೀರ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಾಸುಕಿ ಮದುವೆಯಾಗಲಿದ್ದು, ಈ ಜೋಡಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. ಬೃಂದಾ ಹಾಗೂ ವಾಸುಕಿ ಥಿಯೇಟರ್‌ನಿಂದ ಪರಿಚಯವಾಗಿದ್ದರು.
ಹಿಂದೆಲ್ಲೂ ಪ್ರೀತಿಯ ಬಗ್ಗೆ ಬಹಿರಂಗವಾಗಿ ವಾಸುಕಿ ಹೇಳಿಕೆ ನೀಡಿಲ್ಲ, ಇತ್ತೀಚೆಗಷ್ಟೇ ನಟಿ ತಾರಾ ವಾಸುಕಿ ಮದುವೆ ಬಗ್ಗೆ ಗುಟ್ಟುಬಿಟ್ಟುಕೊಟ್ಟಿದ್ದರು. ಈ ಬಗ್ಗೆ ವಾಸುಕಿ ಪೋಸ್ಟ್ ಮಾಡಿದ್ದು, ಹೊಸ ಪಯಣ ಆರಂಭವಾಗಿದೆ ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆ ಬೇಕು ಎಂದಿದ್ದಾರೆ.