Wednesday, November 29, 2023

Latest Posts

ಗಾಜಾದ ಅಲ್ ಶಿಫಾ ಆಸ್ಪತ್ರೆಯಲ್ಲಿ ಶಸ್ತ್ರಾಸ್ತ್ರ ಪತ್ತೆ, ಇಸ್ರೇಲ್‌ನಿಂದ ವಿಡಿಯೋ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಗಾಜಾದ ಅಲ್ ಶಿಫಾ ಆಸ್ಪತ್ರೆಯಲ್ಲಿ ಇಸ್ರೇಲ್ ಶೋಧವನ್ನು ತೀವ್ರಗೊಳಿಸಿದ್ದು, ಪತ್ತೆಯಾದ ಶಸ್ತ್ರಾಸ್ತ್ರಗಳ ವೀಡಿಯೊಗಳನ್ನು ಬಿಡುಗಡೆ ಮಾಡಿದೆ.

ಗಾಜಾದ ಅಲ್ ಶಿಫಾ ಆಸ್ಪತ್ರೆಯ ಕೆಳಗಿರುವ ಸುರಂಗದಲ್ಲಿ ಹಮಾಸ್ ಕಮಾಂಡ್ ಸೆಂಟರ್ ನಿರ್ಮಿಸಿದೆ ಎಂದು ಇಸ್ರೇಲಿ ಸೇನೆ ಬಹಿರಂಗಪಡಿಸಿದೆ. ಆಸ್ಪತ್ರೆ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ವಿಶ್ವಸಂಸ್ಥೆ ಮತ್ತು ಮಧ್ಯಪ್ರಾಚ್ಯ ದೇಶಗಳ ಖಂಡನೆ ನಡುವೆಯೇ ಇಸ್ರೇಲಿ ಸೇನೆಯು ಆಸ್ಪತ್ರೆಯ ಸಂಕೀರ್ಣದಿಂದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಗ್ರೆನೇಡ್‌ಗಳು, ಮದ್ದುಗುಂಡುಗಳು ಮತ್ತು ಫ್ಲಾಕ್ ಜಾಕೆಟ್‌ಗಳನ್ನು ವಶಪಡಿಸಿಕೊಂಡ ವೀಡಿಯೊವನ್ನು ಹರಿಬಿಟ್ಟಿದೆ.

ಇಸ್ರೇಲಿ ಪಡೆಗಳು ಅಲ್ ಶಿಫಾ ಆಸ್ಪತ್ರೆಯಲ್ಲಿ ಶೋಧವನ್ನು ತೀವ್ರಗೊಳಿಸಿದ್ದು, ʻಇಂದು ರಾತ್ರಿ ನಾವು ಶಿಫಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದ್ದೇವೆ. ನಾವು ಶೋಧವನ್ನು ಮುಂದುವರಿಸುತ್ತೇವೆ’ ಎಂದು ಇಸ್ರೇಲಿ ಸೇನಾ ಕಾರ್ಯಾಚರಣೆಗಳ ಮುಖ್ಯಸ್ಥ ಮೇಜರ್ ಜನರಲ್ ಯಾರೋನ್ ಫಿಂಕೆಲ್‌ಮನ್ ಸೇನೆಯ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!