ಮದುವೆಗೆ ವರ ಹುಡುಕುತ್ತಿದ್ದೀರಾ? ಈ ವಿಷಯಗಳನ್ನು ಮುಖ್ಯವಾಗಿ ಗಮನದಲ್ಲಿಡಿ..

ಒಂದು ವಯಸ್ಸಿಗೆ ಬಂದಮೇಲೆ ಸಂಗಾತಿ ಬೇಕು ಎನಿಸುವುದು ಸಾಮಾನ್ಯ. ಪ್ರೀತಿಸಿ ಮದುವೆಯಾಗುವವರು ತಮ್ಮ ಸಂಗಾತಿ ಚೆನ್ನಾಗಿಯೇ ತಿಳಿದುಕೊಂಡಿರುತ್ತಾರೆ. ಆದರೆ ಅರೇಂಜ್ ಮ್ಯಾರೇಜ್‌ನಲ್ಲಿ ಇದು ಅಸಾಧ್ಯ. ಎರಡು ಮೂರು ಭೇಟಿ ನಂತರವೂ ಮದುವೆಯಾಗಲು ಭಯವಾಗುತ್ತದೆ. ಮದುವೆಯಾಗುವ ಹುಡುಗನಲ್ಲಿ ಇವುಗಳನ್ನು ಗಮನಿಸಿ..

  • ನಿಮ್ಮ ಪ್ರಿಯಾರಿಟಿ ಏನು? ಅವರಿಗೆ ಯಾವ ಕೆಲಸ ಇರಬೇಕು, ಎಷ್ಟು ಓದಿರಬೇಕು, ಯಾವ ಊರಿನಲ್ಲಿ ಸೆಟಲ್ ಆಗಿರಬೇಕು ಫಿಲ್ಟರ್ ಮಾಡಿ.
  • ಕುಟುಂಬದವರ ಬಗ್ಗೆ ಸರಿಯಾಗಿ ವಿಚಾರಿಸಿ, ಎದ್ದು ಕಾಣುವ ಸಮಸ್ಯೆಗಳಿದ್ದರೆ ಇಲ್ಲಿ ತಿಳಿಯುತ್ತದೆ.
  • ಹುಡುಗನ ಕೆಲಸ, ಆತನ ಕಂಪನಿ, ಸಂಬಳ ಪ್ರತಿಯೊಂದರ ಬಗ್ಗೆಯೂ ಸಂಪೂರ್ಣ ಮಾಹಿತಿ ಇರಲಿ.
  • ಒಂದು ಬಾರಿ ಮನೆಗೆ ಬಂದು ನೋಡಿಕೊಂಡು ಹೋದಮೇಲೆ ಒಕೆ ಹೇಳಬೇಡಿ, ಹುಡುಗನನ್ನು ಇನ್ನೆರಡು ಬಾರಿ ಭೇಟಿಯಾಗಿ.
  • ಪ್ರಶ್ನೆಗಳನ್ನು ಹೇಗೆ ಕೇಳೋದು ಎಂದು ಮುಜುಗರ ಬೇಡ, ಮದುವೆ ನಂತರ ಇವನ್ನೆಲ್ಲಾ ಮೊದಲೇ ಕೇಳಬೇಕಿತ್ತು ಎನ್ನೋ ಮಾತು ಬರುತ್ತದೆ.
  • ಬೇರೆಯವರನ್ನು ಹೇಗೆ ಟ್ರೀಟ್ ಮಾಡುತ್ತಾರೆ, ಬೇರೆಯವರ ಬಗ್ಗೆ ಯಾವ ರೀತಿ ಮಾತನಾಡುತ್ತಾರೆ ಎನ್ನುವುದರ ಮೇಲೆ ಅವರ ವ್ಯಕ್ತಿತ್ವ ಅಳಿಯಬಹುದು.
  • ಲುಕ್ಸ್ ಖಂಡಿತಾ ಮುಖ್ಯ. ಆದರೆ ಅದನ್ನೇ ಪ್ರಿಯಾರಿಟಿ ಮಾಡಿಕೊಳ್ಳಬೇಡಿ. ಪರ್ಸನಾಲಿಟಿಗೆ ಬೆಲೆ ಕೊಡಿ.
  • ಹಳೆಯ ಸಂಬಂಧಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಇದು ಮುಂದೆ ನಿಮಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
  • ಹುಡುಗ ನಿಮ್ಮನ್ನು ಗೌರವಿಸುತ್ತಾನಾ? ನಿಮ್ಮ ಮಾತುಗಳನ್ನು ಆಲಿಸುತ್ತಾನಾ? ನಿಮ್ಮ ಕುಟುಂಬದ ಬಗ್ಗೆ ಅವನ ಅಭಿಪ್ರಾಯ ಏನು ತಿಳಿಯಿರಿ.
  • ಮದುವೆಗೆ ತಯಾರಿದ್ದಾರಾ, ಜವಾಬ್ದಾರಿಗಳನ್ನು ಹೊರುವ ಗುಣ ಇದೆಯಾ? ಮದ್ಯಪಾನ, ಧೂಮಪಾನ ಅಭ್ಯಾಸ ಇದೆಯಾ ಗಮನಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!