ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ ಬಹಳ ಮುಖ್ಯವಾಗುತ್ತೆ. ಅನೇಕರು ಕೆಲಸದ ಒತ್ತಡದ ನಡುವೆ ತಮ್ಮ ಪರ್ಸನಲ್ ಲೈಫ್ ಮರೆತು ಬಿಡುತ್ತಾರೆ. ಮತ್ತೆ ಕೆಲವರು ವೈಯಕ್ತಿಕ ಜೀವನದಲ್ಲಿ ಮುಳುಗಿ ಕೆಲಸದ ಹೊಣೆ ನಿರ್ಲಕ್ಷಿಸುತ್ತಾರೆ. ಸಮತೋಲನದ ಕಲೆಯನ್ನ ಕಲಿಯದೆ ಹೋದರೆ ಯಾವತ್ತೂ ಸಂತೋಷವಾಗಿರಲು ಸಾಧ್ಯವಿಲ್ಲ.
ಸಮಯ ನಿರ್ವಹಣೆ:
ದಿನಚರಿಯನ್ನು ಸರಿಯಾಗಿ ಯೋಚನೆ ಮಾಡಿ ಯೋಜಿಸಿ. ಕಾರ್ಯಕ್ಷಮತೆಯಿಂದ ಕೆಲಸ ಮಾಡಿ, ಅನಗತ್ಯವಾಗಿ ಸಮಯ ಹಾಳು ಮಾಡಬೇಡಿ. ಕೆಲಸದ ಸಮಯ ಮತ್ತು ವೈಯಕ್ತಿಕ ಸಮಯವನ್ನು ಡಿವೈಡ್ ಮಾಡಿ.
ಆದ್ಯತೆಯನ್ನು ನಿರ್ಧರಿಸಿ:
ಅಗತ್ಯ ಮತ್ತು ಪ್ರಮುಖ ಕೆಲಸಗಳನ್ನು ಪ್ರಥಮ ಸ್ಥಾನದಲ್ಲಿ ಇಡಿ. ಅತಿ ಹೆಚ್ಚು ಕೆಲಸದ ಒತ್ತಡ ತಗೆದುಕೊಳ್ಳಬೇಡಿ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿ:
ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಅವರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಿ.
ಆರೋಗ್ಯದ ಕಡೆ ಗಮನ ಹರಿಸಿ:
ಸಮತೋಲನಯುಕ್ತ ಆಹಾರ ಸೇವಿಸಿ. ನಿಮ್ಮ ದೇಹಕ್ಕೆ ನಿಯಮಿತ ವ್ಯಾಯಾಮ ನೀಡಿ. ಯಾವ ಆಲೋಚನೆಗಳಿಲ್ಲದೆ ಒಳ್ಳೆಯ ನಿದ್ರೆ ಮಾಡಲು ಪ್ರಯತ್ನಿಸಿ.
ಕೆಲಸ ಮತ್ತು ಮನೆಯಲ್ಲಿ ಶಾಂತಿ ಕಾಯ್ದುಕೊಳ್ಳಿ:
ಕೆಲಸದ ಒತ್ತಡವನ್ನು ಮನೆಯವರೆಗೆ ತರಬೇಡಿ. ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ವಹಿಸಿ.
ಅಭಿರುಚಿಗಳಿಗೆ ಪ್ರಾಮುಖ್ಯತೆ ನೀಡಿ:
ನೀವು ಇಷ್ಟಪಡುವ ಹವ್ಯಾಸಗಳನ್ನು ಅಭ್ಯಾಸ ಮಾಡಿ. ಸಂಗೀತ, ಓದು, ಪ್ರವಾಸ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
ಈ ಅಂಶಗಳನ್ನು ಅನುಸರಿಸುವ ಮೂಲಕ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ ಸಾಧಿಸಬಹುದು.