ಲಾರ್ಡ್ಸ್‌ ಟೆಸ್ಟ್: ನ್ಯೂಜಿಲ್ಯಾಂಡ್​ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಇಂಗ್ಲೆಂಡ್​​ 5 ವಿಕೆಟ್​ಗಳ ಜಯ ದಾಖಲಿಸಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿರುವ ಆಂಗ್ಲರು 1-0 ಮುನ್ನಡೆ ಸಾಧಿಸಿದ್ದು, ಮೂರು ದಿನಗಳಲ್ಲೇ ಪಂದ್ಯ ಅಂತ್ಯಗೊಂಡಿದೆ.
ಎರಡನೇ ಇನ್ನಿಂಗ್ಸ್​ನಲ್ಲಿ 277 ರನ್​​ಗಳ ಗೆಲುವಿನ ಗುರಿ ಹೊಂದಿದ್ದ ಇಂಗ್ಲೆಂಡ್​​ ಆರಂಭದಲ್ಲೇ ಆಘಾತ ಅನುಭವಿಸಿತು. 69 ರನ್​ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಒಂದಾದ ರೂಟ್ ಹಾಗೂ ಸ್ಟೋಕ್ಸ್‌ 90 ರನ್​ ಸೇರಿಸಿ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು.
54 ರನ್​ ಗಳಿಸಿದ್ದ ಸ್ಟೋಕ್ಸ್‌ ಔಟಾದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್​ ಮುಂದುವರೆಸಿದ ರೂಟ್​ (115) 26ನೇ ಶತಕ ದಾಖಲಿಸಿದರಲ್ಲದೆ, ತಂಡವನ್ನು ಗೆಲುವಿನ ದಡ ಸೇರಿಸಿದರು. ಬೆನ್​ ಫೋಕ್ಸ್​ ಅಜೇಯ 32 ಬಾರಿಸಿ ಗೆಲುವಿನಲ್ಲಿ ರೂಟ್​ಗೆ ಸಾಥ್​ ನೀಡಿದರು.
ಇದಕ್ಕೂ ಮುನ್ನ ಪಂದ್ಯದ ಮೊದಲ ಇನ್ನಿಂಗ್ಸ್​ಗಳಲ್ಲಿ ನ್ಯೂಜಿಲ್ಯಾಂಡ್​ 132 ಹಾಗೂ ಇಂಗ್ಲೆಂಡ್​ 141 ರನ್​ಗಳಿಗೆ ಆಲೌಟ್​ ಆಗಿದ್ದವು. ಬಳಿಕ ನ್ಯೂಜಿಲೆಂಡ್​ ಎರಡನೇ ಇನ್ನಿಂಗ್ಸ್​ನಲ್ಲೂ 285 ರನ್​ ಪೇರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!