August 31, 2026
Monday, August 31, 2026
spot_img

ಯಾದಗಿರಿ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಲಾರಿ: ಚಾಲಕ ಪ್ರಾಣಾಪಾಯದಿಂದ ಪಾರು

ಹೊಸದಿಗಂತ ವರದಿ, ಯಾದಗಿರಿ:

ಚಲಿಸುತ್ತಿದ್ದ ಲಾರಿಯ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಹೈದರಾಬಾದ್ ನಿಂದ ಯಾದಗಿರಿ ಕಡೆಗೆ ಸಂಚರಿಸುತ್ತಿದ್ದ ಲಾರಿಯ ಎಂಜಿನ್ ನಲ್ಲಿ ಸೌಂಡ್ ಬಂದು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಎಚ್ಚೆತುಕೊಂಡ ಲಾರಿ ಡ್ರೈವರ್ ಲಾರಿಯಿಂದ ಕೇಳಗಿಳಿದು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೇಸಿಗೆ ಹಿನ್ನೆಲೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಇಂತಹ ಅವಘಡ ಸಂಭವಿಸರಬಹುದು ಎನ್ನಲಾಗುತ್ತಿದೆ. ಗುರಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !