ಹೊಸದಿಗಂತ ವರದಿ, ವಿಜಯನಗರ:
ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-೫೦ರ ಟೋಲ್‌ನಲ್ಲಿ ಅತಿ ವೇಗವಾಗಿ ಬಂದ ಲಾರಿಯೊಂದು ಮೊದಲು ಬುಲೆರೋ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು, ಟೋಲ್ ರೂಮ್ ಗೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತನನ್ನು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಲಾರಿ ಚಾಲಕ ಈರಣ್ಣ ಬಾಗಿ(೩೭) ಎಂದು ಗುರುತಿಸಲಾಗಿದೆ. ಲಾರಿ ಕ್ಲೀನರ್ ಹಾಗೂ ಬೊಲೆರೋ ವಾಹನದಲ್ಲಿದ್ದ ಇನ್ನಿಬ್ಬರು ಸೇರಿದಂತೆ ಮುವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೊಳಗಾದ ಕ್ಯಾಂಟರ್‌ನಲ್ಲಿ ತುಂಬಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಸಂಪುರ್ಣ ಬೀದಿ ಪಾಲಾಗಿದ್ದು, ದಾಳಿಂಬೆ ಬೆಳೆಗಾರರು ಕಣ್ಣಿರಿಡುವಂತಾಯಿತು.
ಘಟನೆ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.