ಹೊಸದಿಗಂತ ಹುಬ್ಬಳ್ಳಿ:
ಟಾಟಾ ಏಸ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಕಲಘಟಗಿ ಪಟ್ಟಣದ ತಡಸ್ ಕ್ರಾಸ್ ಸಮೀಪ ಸಂಭವಿಸಿದೆ.
ತಾರಿಹಾಳ ಗಾರ್ಮೆಂಟ್ಸ್ ಕೆಲಸಕ್ಕೆ ಮಹಿಳೆಯರು ಟಾಟಾ ಏಸ್ ನಲ್ಲಿ ತೆರಳುತ್ತಿದ್ದರು. ಒರ್ವ ಮಹಿಳೆಯನ್ನು ಹತ್ತಿಸಿಕೊಳ್ಳಲು ತಡಸ ಕ್ರಾಸ್ ಬಳಿ ನಿಂತಿದ್ದ ಟಾಟಾ ಏಸ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.
ಲಾರಿಯ ರಭಸಕ್ಕೆ ಓರ್ವ ಮಹಿಳೆ ಮೃತಪಟ್ಟಿದ್ದು, ಆರು ಮಹಿಳೆಯರು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.