ಹೊಸದಿಗಂತ ವರದಿ, ಮಡಿಕೇರಿ:
ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮನೆಯೊಳಗೆ ನುಗ್ಗಿದ ಘಟನೆ ಸಮೀಪದ ಮದೆನಾಡಿನಲ್ಲಿ ನಡೆದಿದೆ.
ಬೆಂಗಳೂರಿನಿಂದ ಮದೆನಾಡು ಮಾರ್ಗವಾಗಿ ಮಂಗಳೂರು ಕಡೆಗೆ ತೆರಳುತ್ತಿದ್ದ 14 ಚಕ್ರದ ಲಾರಿ ಬೆಳಗ್ಗೆ 8.45ರ ಸಮಯದಲ್ಲಿ ಮದೆನಾಡುವಿನ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ.
ಬಳಿಕ ಅಲ್ಲಿನ ನಿವಾಸಿ ಕುಟ್ಟೇಟಿ ಮಾದಪ್ಪ ಎಂಬವರ ಮನೆಗೆ ನುಗ್ಗಿದ್ದು, ಪರಿಣಾಮವಾಗಿ ಮನೆಯ ಮುಂಭಾಗ ಸಂಪೂರ್ಣ ನಾಶವಾಗಿದೆ.
ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.