ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ್ ಗೆ ಸೋಲು: ಏಷ್ಯಾಕಪ್ ಸೂಪರ್-4 ಗೆ ನಾಲ್ಕು ತಂಡಗಳು ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯಾಕಪ್​ನ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ತಾನ್ ವಿರುದ್ಧ ಗೆಲುವು ಸಾಧಿಸಿದ್ದು, ಈ ಮೂಲಕ ಸೂಪರ್-4 ಕ್ಕೆ ಕಾಲಿಟ್ಟಿದೆ.

ಸೂಪರ್-4 ಹಂತದ ಪಂದ್ಯಗಳು ಸೆಪ್ಟೆಂಬರ್ 6 ರಿಂದ ಶುರುವಾಗಲಿದೆ.

ಗ್ರೂಪ್​-ಎ ನಿಂದ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಸೂಪರ್ ಫೋರ್ ಹಂತಕ್ಕೇರಿದರೆ, ಗ್ರೂಪ್​-ಬಿ ನಿಂದ ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ತಂಡಗಳು ಮುಂದಿನ ಹಂತಕ್ಕೇರಿದೆ.

ಲಾಹೋರ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!