ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಹಾಗೂ ರಷ್ಯಾ ನಡುವೆ ಸೇನಾ ದಾಳಿ ಮುಂದುವರಿದಿದೆ. ರಷ್ಯಾ ದಾಳಿಗೆ ಉಕ್ರೇನ್‌ನ ಬುಚಾ ಮತ್ತು ಮರಿಯುಪೋಲ್‌ನಂತಹ ನಗರಗಳು ನಾಶವಾಗಿವೆ. ಉಭಯ ದೇಶಗಳ ನಡುವಿನ ಯುದ್ಧದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಯುದ್ಧದಲ್ಲಿ ಎರಡೂ ದೇಶಗಳ ಸೈನಿಕರು ಸಾಯುತ್ತಿದ್ದಾರೆ. ಉಕ್ರೇನ್ ಪ್ರಧಾನಿ ಝಲೆನ್ಸ್ಕಿ ಮಾತ್ರ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಕೊನೆ ಉಸಿರಿರುವವರೆಗೂ ಯುದ್ಧ ನಡೆಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಉಕ್ರೇನ್‌ಗೆ ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಿಂದ ಬೆಂಬಲ ಸಿಗುತ್ತಿದೆ. ಅಗತ್ಯ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ಪಡೆಗಳಿಗೆ ಸಹಾಯ ಮಾಡುತ್ತಿವೆ. ಈ ನಿಟ್ಟಿನಲ್ಲಿ ಉಕ್ರೇನ್‌ನ ಸೇನೆಯ ಇದುವರೆಗೆ 21,200 ರಷ್ಯಾದ ಸೈನಿಕರನ್ನು ಯುದ್ಧದಲ್ಲಿ ಕೊಲ್ಲಲಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದೆ.
ರಷ್ಯಾದ ಸೇನೆಯ ಜೊತೆಗೆ, 176 ಯುದ್ಧವಿಮಾನಗಳು, 153 ಹೆಲಿಕಾಪ್ಟರ್‌ಗಳು, 838 ಟ್ಯಾಂಕ್‌ಗಳು ಮತ್ತು 2,162 ಶಸ್ತ್ರಸಜ್ಜಿತ ವಾಹನಗಳು ನಾಶವಾಗಿವೆ. ಇದಲ್ಲದೆ, 397 ಫಿರಂಗಿ ವ್ಯವಸ್ಥೆ, 138 MLR ವಾಹನಗಳು ಮತ್ತು 76 ಇಂಧನ ಟ್ಯಾಂಕ್‌ಗಳನ್ನು ನಾಶಪಡಿಸಿದ್ದೇವೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ.
Information on Russian invasion
Losses of the Russian armed forces in Ukraine, April 22 pic.twitter.com/E8wwtjoD9S
— MFA of Ukraine 🇺🇦 (@MFA_Ukraine) April 22, 2022