ಸಾಮೂಹಿಕ ನಮಾಜ್ ಮೂಲಕ ಪ್ರಯಾಣಿಕರಿಗೆ ತೊಂದರೆ, 150 ಜನರ ವಿರುದ್ಧ ಕೇಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆಯಲ್ಲಿ ನಮಾಜ್ ಮಾಡಿದ 150 ಜನರ ವಿರುದ್ಧ ಆಗ್ರಾ ನಗರ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಸಾಮೂಹಿಕವಾಗಿ ನಮಾಜ್‌ ಮಾಡಿ ವಾಹನ ಸವಾರರಿಗೆ ತೊಂದರೆ ನೀಡಿರುವ ಆರೋಪದಡಿಯಲ್ಲಿ ಕೇಸ್‌ ದಾಖಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಸ್ತೆಯಲ್ಲಿ ಜನರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುವ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಆದೇಶ ನೀಡಿದ ಮರುದಿನವೇ ಈ ಘಟನೆ ನಡೆದಿದೆ.

ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜು ರಸ್ತೆಯಲ್ಲಿರುವ ಇಮ್ಲಿ ವಲಿ ಮಸೀದಿ ಬಳಿ, ರಂಜಾನ್ ಸಮಯದಲ್ಲಿ ಐದು ದಿನಗಳ ಕಾಲ ರಸ್ತೆಯಲ್ಲಿ ನಮಾಜ್ ಮಾಡಲು ನಗರ ಆಡಳಿತದಿಂದ ಅನುಮತಿ ಕೋರಿದೆ. ಆದರೆ, ಇಡೀ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ನಮಾಜ್ ಮಾಡಿದರು. ಇದಕ್ಕೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ರಸ್ತೆಯಲ್ಲಿ ನಮಾಜ್ ಮಾಡಿ ಜನರಿಗೆ ಅನಾನುಕೂಲತೆಯನ್ನುಂಟು ಮಾಡಿದ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಮಧ್ಯ ಪ್ರವೇಶಿಸಿ ಐದು ದಿನಗಳ ಅನುಮತಿಯನ್ನು ಮೂರು ದಿನಕ್ಕೆ ಇಳಿಸಿದರು. ನಮಾಜ್‌ ಸಮಯ ಮೀರಿ ರಸ್ತೆ ತಡೆ ನಡೆಸಿದ ಮುಸ್ಲಿಂಮರ ವಿರುದ್ಧ ಮಸೀದಿ ಸುತ್ತ ಮುತ್ತಲಿನ ಅಂಗಡಿಕಾರರು ಹಾಗೂ ಇತರೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.ಎರಡು ದಿನಗಳಿಗೆ ಪರವಾನಗಿ ನೀಡಿದ್ದ ಅನುಮತಿಯನ್ನು ಪೊಲೀಸರು ರದ್ದುಗೊಳಿಸಿದರು.

ಅನುಮತಿ ರದ್ದುಗೊಳಿಸದ ನಂತರವೂ ಸಮೂಹಿಕ ನಮಾಜ್‌ ಮಾಡಿದ್ದರ ಆರೋಪದಡಿಯಲ್ಲಿ ಇದೀಗ 150ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!