August 3, 2026
Monday, August 3, 2026
spot_img

ಪಕ್ಕದಮನೆಯ ಹುಡುಗಿ ಜೊತೆ ಪ್ರೀತಿ ಪ್ರೇಮ ಪ್ರಣಯ, ಪ್ರಶ್ನಿಸಿದಕ್ಕೆ ಪತ್ನಿಯ ಭೀಕರ ಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಕ್ಕದ ಮನೆಯ ಹುಡುಗಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.

ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದ ಹೊನ್ನಿಕೇರಿ ಗ್ರಾಮದ ಸಂಜನಾ ಮೃತರು. ಈಕೆಯ ಪತಿ, ಆರೋಪಿ ಭಗವತ್‌ ಜ್ಞಾನೇಶ್ವರ್‌ಗೆ ಪಕ್ಕದ ಮನೆಯ ಯುವತಿ ಜೊತೆ ಅನೈತಿಕ ಸಂಬಂಧವಿತ್ತು. ಸಂಜನಾ ಹಾಗೂ ಭಗವತ್‌ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಭಗವತ್‌ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಜೆಯಲ್ಲಿ ಮನೆಗೆ ಬಂದ ವೇಳೆ ಪಕ್ಕದ ಮನೆಯ ಹುಡುಗಿಯ ಜತೆ ಇರುತ್ತಿದ್ದರು. ಇದನ್ನು ಕಂಡ ಪತ್ನಿ ಪತಿಯ ಜೊತೆ ಗಲಾಟೆ ಮಾಡಿದ್ದರು. ಆಕೆಯನ್ನು ಮಾತನಾಡಲು ಕಾಡಿಗೆ ಕರೆದುಕೊಂಡು ಹೋದ ಭಗವತ್‌ ಜಗಳವಾಡಿ ಕಬ್ಬಿಣದ ರಾಡ್‌ನಿಂದ ತಲೆಗೆ ಕತ್ತಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸಂಜನಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜನಾ ಮೃತಪಟ್ಟಿದ್ದಾರೆ. ಬ್ರಿಮ್ಸ್ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !