ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್‌ಗೆ ಸಜ್ಜಾಗಿದೆ.
ಇದ್ರ ಮುನ್ನ ಈ ಜೋಡಿ ಸಿನಿಮಾಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದು, ವಿವಿದೆಡೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಇಬ್ಬರು ಅನೇಕ ವಿಚಾರಗಳನ್ನು ತಿಳಿಸಿದ್ದು, ಇದರಿಂದ ರಕ್ಷಿತ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹರಿದಾಡುತ್ತಿದೆ.
ರುಕ್ಮಿಣಿ ವಸಂತ್ ನಟಿಸಿರುವ ಎರಡನೇ ಸಿನಿಮಾ ಇದಾಗಿರಬಹುದು ಆದರೆ ಆಕೆ ಈ ಚಿತ್ರಕ್ಕೆ ಹಾಕಿರುವ ಶ್ರಮ ತುಂಬಾನೇ ಇದೆ. ಸಿನಿಮಾದಲ್ಲಿರುವ ಕ್ಯಾರೆಕ್ಟರ್ ಬಗ್ಗೆ ರುಕ್ಮಿಣಿ ಬುಕ್ ಬರೆದುಕೊಂಡಿದ್ದಾರೆ ಆಗಾಗ ಪ್ರಶ್ನೆ ಕೇಳುವರು ಆಗ ನಾನು ಯೋಚನೆ ಮಾಡಲು ಶುರು ಮಾಡುತ್ತಿದ್ದೆ. ಕಥೆಗಾಗಿ ರುಕ್ಮಿಣಿ ಎಷ್ಟು ಪ್ರಿಯಾ ಆಗುವುದಕ್ಕೆ ಸಾಧ್ಯ ನಾನು ಅಷ್ಟೇ ಮನು ಆಗುವುದಕ್ಕೆ ಸಾಧ್ಯ ಏಕೆಂದರೆ ಕಲಾವಿದ ಬಾಯಲ್ಲಿ ಏನು ಮಾತನಾಡುತ್ತೀವಿ ಅದಕ್ಕಿಂತ ಕಣ್ಣಿನಲ್ಲಿ ಮಾತನಾಡುವುದು ತುಂಬಾ ಮುಖ್ಯವಾಗುತ್ತದೆ. ಅಕ್ಟಿಂಗ್ ಅಂದ್ರೆ ಬೇರೆ ಏನೂ ಅಲ್ಲ ಅದು ರಿಯಾಕ್ಟಿಂಗ್ ಅಷ್ಟೆ. ಆದ್ರೆ ನಿಜ ಹೇಳಬೇಕು ಅಂದ್ರೆ 10 ವರ್ಷಗಳ ನಂತರ ನಾನು ಇಂತಹ ಒಳ್ಳೆಯ ಕೋ-ಸ್ಟಾರ್‌ನ ಭೇಟಿ ಮಾಡಿರುವುದು ಏಕೆಂದರೆ ಅನೇಕ ರೀತಿಗಳಲ್ಲಿ ನನಗೆ ಸಪೋರ್ಟ್ ಮಾಡಿದ್ದಾರೆ. ರುಕ್ಮಿಣಿ ಇದ್ದ ರೀತಿ ಅಕೆ ಹಾಕುತ್ತಿದ್ದ ಶ್ರಮ ಮೆಚ್ಚಬೇಕು…ಧನ್ಯವಾದಗಳು ರುಕ್ಮಿಣಿ’ ಎಂದು ಹೇಳಿದ್ದಾರೆ.
ಇದೀಗ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇಬ್ಬರ ನಡುವಿನ ಮಾತು ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಜೊತೆಗೆ ರಕ್ಷಿತ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹರಿದಾಡುತ್ತಿದೆ.
ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ನಟಿಸಿದಾಗ ತಮ್ಮ ಕೋ-ಸ್ಟಾರ್ ರಶ್ಮಿಕಾ ಮಂದಣ್ಣ ಮೇಲೂ ಪ್ರೀತಿ ಆಗಿತ್ತು. ಪ್ರೀತಿ ಬೆಳೆದು ಇಬ್ಬರೂ ಮದುವೆ ಮಾಡಿಕೊಳ್ಳಲು ಮುಂದಾಗಿ ತಮ್ಮ ಫ್ಯಾಮಿಲಿಗಳನ್ನು ಒಪ್ಪಿಸಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ ಕೆಲವೇ ಕೆಲವು ತಿಂಗಳುಗಳು ಇದೆ ಎನ್ನುವಷ್ಟರಲ್ಲಿ ಬ್ರೇಕಪ್ ಮಾಡಿಕೊಂಡರು.