Monday, October 2, 2023

Latest Posts

ಮನಿಲ್ಯಾಂಡರಿಂಗ್ ಪ್ರಕರಣ IRS ಅಧಿಕಾರಿ ಜೊತೆ ನಟಿ ನವ್ಯಾ ನಾಯರ್ ನಂಟು ಬಯಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮನಿಲ್ಯಾಂಡರಿಂಗ್ (Money Laundering) ಪ್ರಕರಣದಲ್ಲಿ ಬಂಧನವಾಗಿರುವ (Arrest) ಐ.ಆರ್.ಎಸ್ ಅಧಿಕಾರಿ ಸಚಿನ್ ಸಾವಂತ್ (Sachin Sawant) ಜೊತೆ ಇದೀಗ ಮಲಯಾಳಂನಟಿ ನವ್ಯಾ ನಾಯರ್ (Navya Nair) ಸ್ನೇಹ ಹೊಂದಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.

ತನಿಖೆಯ ವೇಳೆನಟಿ ನವ್ಯಾ ನಾಯರ್ ಅವರಿಗೆ ಅಧಿಕಾರಿ ಸಚಿನ್ ಅವರು ಚಿನ್ನದ ಉಡುಗೊರೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದು, ಇಡಿ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ನವ್ಯಾ ಅವರನ್ನು ಮುಂಬೈಗೆ ಕರೆಯಿಸಿಕೊಂಡು ವಿಚಾರಣೆ ಮಾಡಿದ್ದಾರೆ.

ನವ್ಯಾ ಭೇಟಿಗಾಗಿ ಸಚಿನ್ ಹಲವು ಬಾರಿ ಕೊಚ್ಚಿನ್ ಗೂ ಹೋಗಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ತನಿಖೆ ವೇಳೆ ಅಧಿಕಾರಿಯ ಮೊಬೈಲ್, ವಾಟ್ಸಪ್ ಡೇಟಾ ಪರಿಶೀಲಿಸಿದಾಗ ಇವೆಲ್ಲವೂ ಪತ್ತೆ ಆಗಿವೆ. ಈ ಕುರಿತು ನವ್ಯಾ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅದರಾಚೆ ಬೇರೆ ಏನೂ ಇಲ್ಲ ಸ್ನೇಹದ ಸಂಕೇತವಾಗಿ ಚಿನ್ನದ ಉಡುಗೊರೆ ಕೊಟ್ಟಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!