Friday, February 3, 2023

Latest Posts

VIRAL VIDEO | ‘ಲವ್ ಈಸ್ ಇನ್ ದಿ ಏರ್’ ವಿಮಾನದಲ್ಲೇ ರೊಮ್ಯಾಂಟಿಕ್ ಪ್ರಪೋಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತೀ ಹುಡುಗಿಗೂ ತನ್ನ ಇಷ್ಟದ ಹುಡುಗ ವಿಭಿನ್ನವಾಗಿ ಪ್ರಪೋಸ್ ಮಾಡಲಿ ಅನ್ನೋ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಸರ್ಪೈಸ್ ಪ್ರಪೋಸಲ್ ಆದರೆ ಖುಷಿಗೆ ಪಾರವೇ ಇರೋದಿಲ್ಲ.

ಇಂಥದ್ದೇ ಒಂದು ಸನ್ನಿವೇಶ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮಾಸ್ಕ್ ಹಾಕಿಕೊಂಡು ಬರುತ್ತಾನೆ. ಆತನ ಕೈಲಿ ಪ್ರೀತಿಯ ಫೋಟೊ ಹಾಗೂ ವಿಲ್ ಯು ಮ್ಯಾರಿ ಮಿ ಬೋರ್ಡ್ ಕೂಡ ಇದೆ.

ಮಾಸ್ಕ್ ಹಾಕಿಕೊಂಡು ಬಂದು ಹೆಲೋ ಮ್ಯಾಡಮ್ ಎಂದು ಮಾಸ್ಕ್ ತೆಗೆದು ಬೋರ್ಡ್ ತೋರಿಸಿದಾಗ ಪ್ರೀತಿಸುತ್ತಿದ್ದ ಯುವತಿ ಮುಖದಲ್ಲಿ ಖುಷಿ+ ಆಶ್ಚರ್ಯ!

ಸೀಟ್ ಬಿಟ್ಟು ಆಕೆ ಹೊರಬಂದ ಮೇಲೆ ಸಿನಿಮೀಯ ರೀತಿಯಲ್ಲಿ ಕೈಯಲ್ಲಿ ರಿಂಗ್ ಹಿಡಿದು, ಮೊಣಕಾಲ ಮೇಲೆ ಕುಳಿತು ಆತ ವಿಲ್ ಯು ಮ್ಯಾರಿ ಮಿ ಎಂಬ ಪ್ರಶ್ನೆಯಿಟ್ಟಿದ್ದಾನೆ. ರಿಂಗ್ ಹಾಕಿಸಿಕೊಂಡ ಯುವತಿ ಖುಷಿಯಿಂದ ಹೂಗುಟ್ಟಿ ಆತನನ್ನು ತಬ್ಬಿದ್ದಾಳೆ.

ಪ್ರಯಾಣಿಕರಿಂದ ತುಂಬಿದ್ದ ವಿಮಾನದಲ್ಲಿ ಪ್ರಪೋಸ್ ಮಾಡಿದ್ದು, ಜನರು ಇದನ್ನು ಖುಷಿಯಿಂದ ವೀಕ್ಷಿಸಿದ್ದಾರೆ. ಎಲ್ಲರೂ ಪ್ರೀತಿಗೆ ಸಪೋರ್ಟ್ ಮಾಡಿದಂತೆ ಮುಗುಳ್ನಗುತ್ತಾ ಜೋಡಿಗೆ ಆಶೀರ್ವದಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜೋಡಿ ಸದಾ ಖುಷಿಯಿಂದ ಇರಲಿ ಎಂದು ಹಾರೈಸಿದ್ದಾರೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!