Friday, June 2, 2023

Latest Posts

ದೇಶದಲ್ಲಿ ಪ್ರೇಮವಿವಾಹಗಳೇ ವಿಚ್ಛೇದನ ಹೆಚ್ಚಾಗಲು ಕಾರಣ: ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ರೇಮವಿವಾಹಗಳೇ ವಿಚ್ಛೇದನ ಹೆಚ್ಚಾಗಲು ಕಾರಣ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಸಂಜಯ್‌ ಕರೋಲ್‌ ನೇತೃತ್ವದ ಪೀಠವು ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವರ್ಗಾವಣೆ ಅರ್ಜಿ ವಿಚಾರಣೆ ನಡೆಸಿದರು.

ಅರ್ಜಿಯ ವಿಚಾರಣೆ ವೇಳೆ ವಕೀಲರು, ದಂಪತಿಯದ್ದು ಪ್ರೇಮ ವಿವಾಹ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಇದೇ ವೇಳೆ, ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು, ಪ್ರೀತಿಸಿ ಮದುವೆಯಾದವರೇ ಹೆಚ್ಚಿನ ಪ್ರಮಾಣದಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಿದರು. ಮೊದಲು ನ್ಯಾಯಾಲಯವು ಇಬ್ಬರ ವಿಚ್ಛೇದನಕ್ಕೆ ಮಧ್ಯಸ್ಥಿಕೆ ಅಗತ್ಯ ಎಂದು ಹೇಳಿತ್ತು. ಆದರೆ, ಮಧ್ಯಸ್ಥಿಕೆಗೆ ಮಹಿಳೆಯ ಪತಿಯು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ನ್ಯಾಯಾಲಯ ಕೊನೆಗೆ ಮಧ್ಯಸ್ಥಿಕೆಗೆ ಸೂಚಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!