Monday, September 26, 2022

Latest Posts

ಶಸ್ತ್ರ ಕೆಳಗಿಟ್ಟು ಎಸ್​ಟಿಎಫ್ ಮುಂದೆ ಶರಣಾದ ಉಗ್ರಗಾಮಿ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕುಖ್ಯಾತ ಉಗ್ರಗಾಮಿ ಸಂಘಟನೆಯಾದ ಕಮತಾಪುರ ವಿಮೋಚನಾ ಉಗ್ರ ಸಂಘಟನೆ(ಕೆಎಲ್​ಒ)ಯ ಜನರಲ್ ಸೆಕ್ರೆಟರಿ ಕೈಲಾಶ್ ಕೋಚ್ ಅಲಿಯಾಸ್ ಕೇಶವ್ ರಾಯ್ ಮತ್ತು ಅವರ ಪತ್ನಿ ಸ್ವಪ್ನಾ ಶಸ್ತ್ರಾಸ್ತ್ರ ತ್ಯಜಿಸಿ ತಮ್ಮ ಬಂದೂಕುಗಳೊಂದಿಗೆ ಪ.ಬಂಗಾಳದ ಪೊಲೀಸ್​ ವಿಶೇಷ ಕಾರ್ಯಪಡೆ(ಎಸ್​ಟಿಎಫ್​) ಮುಂದೆ ಶರಣಾಗಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನನಗೆ ನಂಬಿಕೆ ಇದೆ. ಶರಣಾಗುವಂತೆ ಆಕೆಯ ಮನವಿಗೆ ಸ್ಪಂದಿಸಿದ್ದೇನೆ. ನಾನು ಮುಖ್ಯವಾಹಿನಿಯ ಸಮಾಜದ ಭಾಗವಾಗಲು ಬಯಸುತ್ತೇನೆ. ನಾನು ಹಿಂಸಾಚಾರದ ಹಾದಿಯನ್ನು ತೊರೆದಿದ್ದೇನೆ ಮತ್ತು ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯುತ್ತೇನೆ ಎಂದು ಕೈಲಾಶ್ ಹೇಳಿದ್ದಾರೆ.
ಕೈಲಾಶ್ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA) ಗೂ ಸಂಪರ್ಕ ಹೊಂದಿದ್ದರು. “ನಾನು ದೀರ್ಘ ಕಾಲದಿಂದ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಹಿಂಸೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಈಗ ನನಗೆ ಅರಿವಾಗಿದೆ. ತಮ್ಮ ಬಂದೂಕುಗಳೊಂದಿಗೆ ಕಾಡಿನಲ್ಲಿ ಅಲೆಯುತ್ತಿರುವ ಇತರ ಉಗ್ರಗಾಮಿಗಳಿಗೂ ಮುಖ್ಯವಾಹಿನಿಗೆ ಮರಳಲು ನಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಾಲ್ಕು ಪ್ರಕರಣಗಳಲ್ಲಿ ಹಾಗೂ ನೆರೆಯ ಅಸ್ಸಾಂನಲ್ಲಿ ವಿವಿಧ ಪ್ರಕರಣಗಳಲ್ಲಿ ಕೈಲಾಶ್ ಬೇಕಾಗಿದ್ದಾನೆ. ಸ್ವಪ್ನಾ ಮತ್ತು ಕೈಲಾಶ್ 2014ರಲ್ಲಿ ಸಪ್ನಾರನ್ನು ವಿವಾಹವಾಗಿದ್ದನು. ಆ ಬಳಿಕ ಸ್ವಪ್ನಾ ಸಹ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಳು.
ಇನ್ನೂ ಹಲವಾರು ಕೆಎಲ್‌ಒ ಉಗ್ರರು ಶೀಘ್ರದಲ್ಲೇ ಶರಣಾಗಲಿದ್ದಾರೆ ಎಂದು ಎಸ್​ಟಿಎಫ್ ಅಧಿಕಾರಿ ಮಾಳವಿಯಾ ಹೇಳಿದ್ದಾರೆ. “ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರನ್ನು ಮತ್ತೆ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!