ಪತ್ನಿ ಇದ್ದರೂ ಮತ್ತೊಬ್ಬಳ ಜೊತೆ ಲವ್: ಮದುವೆಯಾಗು ಎಂದಿದ್ದಕ್ಕೆ ಕೊಂದು ಮ್ಯಾನ್ ಹೋಲ್ ಗೆ ಎಸೆದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಂಶಾಬಾದ್‌ ನಲ್ಲಿ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿ ಶವವನ್ನು ಸರೂರ್‌ ನಗರದ ಮ್ಯಾನ್‌ ಹೋಲ್‌ಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

ಮನೆಯಲ್ಲೊಬ್ಬಳು ಮಡದಿ ಇದ್ದರೂ ಲವ್ವರ್‌ ಇರಬೇಕು ಎಂಬ ಅರ್ಚಕನೊಬ್ಬನ ಶೋಕಿನಿಂದ ತೆಲಂಗಾಣದಲ್ಲಿ 30 ವರ್ಷದ ಮಹಿಳೆಯೊಬ್ಬರ (Apsara Murder) ಜೀವವೇ ಬಲಿಯಾಗಿದೆ.

ಸರೂರ್‌ ನಗರದ ದೇವಾಲಯದಲ್ಲಿ ಅರ್ಚಕನಾಗಿರುವ ವೆಂಕಟ ಸೂರ್ಯ ಸಾಯಿ ಕೃಷ್ಣನಿಗೆ ಈಗಾಗಲೇ ಮದುವೆಯಾಗಿದೆ. ಆದ್ರೂ ಅಪ್ಸರಾ ಎಂಬ ಮಹಿಳೆಯ ಜತೆ ಸಂಬಂಧ ಬೆಳೆಸಿದ್ದಾನೆ. ಇಬ್ಬರ ಪ್ರೀತಿ ಗಾಢವಾದ ಮೇಲೆ ನನ್ನನ್ನು ಮದುವೆಯಾಗು ಎಂದು ಅಪ್ಸರಾ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮದುವೆಯಾದ ಕಾರಣ ಮತ್ತೊಂದು ಮದುವೆಯಾಗಲು ಒಪ್ಪದ ವೆಂಕಟಸೂರ್ಯ ಸಾಯಿ ಕೃಷ್ಣ, ಆಕೆಯನ್ನು ಕೊಂದು, ಚರಂಡಿಯ ಗುಂಡಿಯಲ್ಲಿ ಎಸೆದಿದ್ದಾನೆ.

ಗೋಶಾಲೆಗೆ ಭೇಟಿ ನೆಪದಲ್ಲಿ ಕೊಲೆ
ವೆಂಕಟಸೂರ್ಯ ಸಾಯಿ ಕೃಷ್ಣನು ಗೋಶಾಲೆಗೆ ಭೇಟಿ ನೀಡೋಣ ಎಂದು ಅಪ್ಸರಾ ಅವರನ್ನು ಕರೆಸಿದ್ದಾನೆ. ವೆಂಕಟೇಶ್ವರ ಕಾಲೋನಿ ನಿವಾಸಿಯಾದ ಅಪ್ಸರಾ, ವೆಂಕಟಸೂರ್ಯ ಸಾಯಿ ಕೃಷ್ಣನ ಮಾತು ಕೇಳಿ ಸುಲ್ತಾನ್‌ಪಳ್ಳಿಯಲ್ಲಿರುವ ಗೋಶಾಲೆಗೆ ಹೋಗಿದ್ದಾರೆ. ಇದೇ ವೇಳೆ, ನರ್ಕುಡಾ ಗ್ರಾಮದ ಹೊರವಲಯದಲ್ಲಿ ಕೃಷ್ಣನು ಅಪ್ಸರಾ ತಲೆಮೇಲೆ ಬಂಡೆಗಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಚರಂಡಿ ಗುಂಡಿಯಲ್ಲಿ ಎಸೆದಿದ್ದಾನೆ .

ಜೂನ್‌ 3ರಿಂದ ಅಪ್ಸರಾ ಕಾಣೆಯಾದ ಕಾರಣ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಅಪ್ಸರಾ ಕಾಲ್‌ ರೆಕಾರ್ಡ್ಸ್‌ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವೆಂಕಟಸೂರ್ಯ ಸಾಯಿ ಕೃಷ್ಣನನ್ನು ಬಂಧಿಸಿದ್ದಾರೆ.

ಬಂಧಿಸಿದ ಬಳಿಕ ಅರ್ಚಕನು ತಾನು ನಡೆಸಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಮದುವೆಯಾಗು ಎಂಬುದಾಗಿ ಅಪ್ಸರಾ ಪೀಡಿಸಿದ ಕಾರಣ ಕೊಲೆ ಮಾಡಿದೆ ಎಂಬುದಾಗಿ ವೆಂಕಟಸೂರ್ಯ ಸಾಯಿ ಕೃಷ್ಣ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!