ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ಈಗ ಹೊಸದಾಗಿ ಬೆಲೆ ಎಷ್ಟು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶಾದ್ಯಂತ ಗೃಹಬಳಕೆಯ ಅಡುಗೆ ಸಿಲಿಂಡರ್‌ಗಳ ಬೆಲೆಯನ್ನು ತಕ್ಷಣ ಜಾರಿಗೆ ಬರುವಂತೆ ಜುಲೈ 6 ಬುಧವಾರದಿಂದ ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ಮನೆಗಳಲ್ಲಿ ಬಳಸುವ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 50ರೂ ಹೆಚ್ಚಿಸಲಾಗಿದೆ.

ಈ ಬೆಲೆ ಹೆಚ್ಚಳದ ನಂತರ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ದೆಹಲಿಯಲ್ಲಿ 1,053ರೂ.ಗೆ ಏರಿಕೆಯಾದರೆ ಮುಂಬೈನಲ್ಲಿ ಸಿಲಿಂಡರ್‌ನ ಬೆಲೆ ಈಗ 1,052.50 ರೂ.ಆಗಲಿದೆ. ಕೋಲ್ಕತ್ತಾದಲ್ಲಿ 1,079 ರೂ. ಮತ್ತೊಂದೆಡೆ, ಚೆನ್ನೈ ನಿವಾಸಿಗಳು ಒಂದು ಸಿಲಿಂಡರ್‌ಗೆ 1,068.50 ರೂ. ನೀಡಬೇಕಾಗಿದೆ.

ಇನ್ನು ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಒಂದು ಸಿಲಿಂಡರ್‌ ಬೆಲೆಯು ಈ ಹಿಂದೆ 1,005.50ರಷ್ಟಿತ್ತು ಈಗ ಹೊಸದಾಗಿ ಒಂದು ಸಿಲಿಂಡರ್‌ ಬೆಲೆಯು 1,055.50ಕ್ಕೆ ತಲುಪಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆಯ ಪ್ರಕಾರ ದೇಶೀಯ 5 ಕೆಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ರೂ 18 ಹೆಚ್ಚಿಸಲಾಗಿದೆ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ 8.50 ರಷ್ಟು ಇಳಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!