ನೆರೆಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ LPG ಗ್ಯಾಸ್ ಅಗ್ಗ: ಕೇಂದ್ರ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಫಲಾನುಭವಿಗಳಿಗೆ ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿ 603 ರೂ.ಗೆ ಸಿಗುತ್ತಿದ್ದು, ಇದು ನೆರೆಯ ದೇಶಗಳಲ್ಲಿನ ದರಗಳಿಗೆ ಹೋಲಿಸಿದರೆ ಅಗ್ಗವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವರು,ಉಜ್ವಲಾ ಸಿಲಿಂಡರ್‌ಗಳು 603 ರೂ.ಗಳಲ್ಲಿ ಲಭ್ಯವಿವೆ. ಇದರ ಬೆಲೆ ಪಾಕಿಸ್ತಾನದಲ್ಲಿ ರೂ. 1,059.46, ಶ್ರೀಲಂಕಾದಲ್ಲಿ ರೂ. 1,033.35 ಮತ್ತು ನೇಪಾಳದಲ್ಲಿ ರೂ. 1,198.56. ಇದೆ.ನಾವು ಎಲ್‌ಪಿಜಿ ಸಿಲಿಂಡರ್‌ಗಳನ್ನು ಶೇಕಡಾ 50 ರಷ್ಟು ಬೆಲೆಗೆ ನೀಡುತ್ತಿದ್ದೇವೆ. ಅದಕ್ಕಾಗಿಯೇ ಸಿಲಿಂಡರ್‌ಗಳು ಭಾರತದಲ್ಲಿ ಅಗ್ಗವಾಗಿವೆ ಎಂದು ಅವರು ಹೇಳಿದರು.

ಸೌದಿ ಅರೇಬಿಯಾದಲ್ಲಿ LPG ಬೆಲೆ ಎರಡು ವರ್ಷಗಳಲ್ಲಿ ಪ್ರತಿ ಟನ್‌ಗೆ USD 415 ರಿಂದ USD 700ಗೆ ಏರಿದೆ, ಆದರೆ ಸರ್ಕಾರವು ದರಗಳ ಏರಿಕೆಯನ್ನು ಹೀರಿಕೊಂಡಿದೆ ಎಂದು ಅವರು ಹೇಳಿದರು.

ಪಿಎಂಯುವೈ ಅಡಿಯಲ್ಲಿ ಬಳಕೆಯು ಈಗ ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 2.8 ಸಿಲಿಂಡರ್‌ಗಳಿಗೆ ಏರಿದೆ . ಯೋಜನೆಯಡಿ ಸಂಪರ್ಕಗಳ ಸಂಖ್ಯೆಯೂ 9.6 ಕೋಟಿಗೆ ಏರಿಕೆಯಾಗಿದ್ದು, ಬಳಕೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!