ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ಪಾಕಿಸ್ತಾನದ ಸೇನಾ ಸಿಬ್ಬಂದಿಯ ಹೊಸ ಮುಖ್ಯಸ್ಥರಾಗಿ (COAS) ಗುರುವಾರ ನೇಮಕ ಮಾಡಲಾಗಿದೆ. ದೇಶದಲ್ಲಿ ಮುಂದಿನ ಸೇನಾ ಮುಖ್ಯಸ್ಥರು ಯಾರಾಗುತ್ತಾರೆ ಎಂಬ ತೀವ್ರ ಊಹಾಪೋಹಗಳು ಮತ್ತು ರಾಜಕೀಯ ಗೊಂದಲಕ್ಕೆ ತೆರೆ ಎಳೆಯಲಾಯಿತು.
ಪಾಕಿಸ್ತಾನದ ಪ್ರಧಾನ ಮಂತ್ರಿ ಮುಹಮ್ಮದ್ ಶಹಬಾಜ್ ಷರೀಫ್ ಅವರು ಲೆಫ್ಟಿನೆಂಟ್ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರನ್ನು ಜಂಟಿ ಮುಖ್ಯಸ್ಥರ ಅಧ್ಯಕ್ಷರಾಗಿ ಮತ್ತು ಲೆಫ್ಟಿನೆಂಟ್ ಜನರಲ್ ಸೈಯದ್ ಅಸಿಮ್ ಮುನೀರ್ ಅವರನ್ನು ಸೇನಾ ಮುಖ್ಯಸ್ಥರಾಗಿ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ನೇಮಕ ಮಾಡಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಟ್ವೀಟ್ ಮಾಡಿದ್ದಾರೆ.
ಬುಧವಾರ ಪಾಕಿಸ್ತಾನ ಸರ್ಕಾರವು ಹೊಸ COAS ನೇಮಕಾತಿಗಾಗಿ ಹೆಸರುಗಳನ್ನು ರಕ್ಷಣಾ ಸಚಿವಾಲಯದಿಂದ ಮಾಹಿತಿ ಸ್ವೀಕರಿಸಿದೆ ಎಂದು ದೃಢಪಡಿಸಿತು. 61 ವರ್ಷದ ಜನರಲ್ ಬಾಜ್ವಾ ಅವರು ಮೂರು ವರ್ಷಗಳ ಅಧಿಕಾರಾವಧಿ ಬಳಿಕ ಮುಂದಿನ ವಾರ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆ ಪಾಕ್ ಸೇನೆಗೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.