ಜಸ್ಟ್ ಮಿಸ್… ಬದುಕಿತು ಬಡಜೀವ: ಶರ್ಟ್‌ ಮೂಲಕ ಮೊಸಳೆ ಹಿಡಿಯಲು ಯತ್ನಿಸಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೂರದಿಂದ ಮೊಸಳೆಯನ್ನು ನೋಡುತ್ತಿದ್ದರೆ ಸಾಕು ಮೈತುಂಬಾ ಬೆವರು ಸುರಿಯುತ್ತದೆ. ಇವುಗಳೊಂದಿಗೆ ಬಹಳ ಎಚ್ಚರಿಕೆಯಿಂದಿರಬೇಕು ಇಲ್ಲವಾದಲ್ಲಿ ಯಮಲೋಕಕ್ಕೆ ಟಿಕೆಟ್ ತೆಗೆದುಕೊಂಡಂತೆ. ಇಲ್ಲೊಬ್ಬ ಶರ್ಟ್‌ ಅನ್ನು ಬಲೆಯಂತೆ ಬಳಸಿ ಮೊಸಳೆ ಹಿಡಿಯಲು ಯತ್ನಿಸಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಮೊದಲಿಗೆ ಮೊಸಳೆ ಮೇಲೆ ಶರ್ಟ್‌ ಎಸೆದ ವ್ಯಕ್ತಿ ನಂತರ ಕೈಯಿಂದ ಹಿಡಿಯಲು ಯತ್ನಿಸಿ ವಿಫಲನಾಗಿದ್ದಾನೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮೊಸಳೆ ಹಿಂತಿರುಗಿ ದಾಳಿ ಮಾಡಿದೆ. ಅದೃಷ್ಟವಶಾತ್‌ ಸಾಯಿಸದೆ ಸುಮ್ಮನೆ ಬಿಟ್ಟಿದೆ. ಮೊಸಳೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!