ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಖನೌ -ಚೆನ್ನೈ ನಡುವಿನ 45ನೇ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಇದರೊಂದಿಗೆ ಅಂಕ ಎರಡೂ ತಂಡಗಳು ಹಂಚಿಕೊಂಡಿದೆ.
ಒಟ್ಟು 11 ಅಂಕ ಸಂಪಾದಿಸಿರುವ ಲಖನೌ ಸೂಪರ್ ಜೈಂಟ್ಸ್ 2ನೇ ಸ್ಥಾನಕ್ಕೆಲಗ್ಗೆ ಇಟ್ಟಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಲಖನೌ ಹಾಗೂ ಚೆನ್ನೈ ನಡುವಿನ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಯಾಗಿತ್ತು. ಟಾಸ್‌ಗೂ ಮೊದಲು ಮಳೆ ಕಾರಣ ವಿಳಂಬವಾಗಿತ್ತು. ಮಳೆ ನಿಂತ ಬೆನ್ನಲ್ಲೇ ಟಾಸ್ ಮುಗಿಸಿ ಪಂದ್ಯ ಆರಂಭಗೊಂಡಿತ್ತು. 3.03ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ 3.45ಕ್ಕೆ ಆರಂಭಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು.
ಲಖನೌ 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. ಇದೇ ವೇಳೆ ಮಳೆ ಅಡ್ಡಿಯಾಯಿತು. ಬಳಿಕ ಪಂದ್ಯ ಮುಂದುವರಿಸಲು ಮಳೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯ ರದ್ದು ಮಾಡಲಾಯಿತು.