ಕಾಂಗ್ರೆಸ್ ಸೇರಿ ದಾರಿ ತಪ್ಪಿದ ಹಿರಿಯ ನಾಯಕ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಬಿಜೆಪಿಯಿಂದ ಆರು ಬಾರಿ ಜಯಗಳಿಸಿ, ಎಲ್ಲ ಸ್ಥಾನ ಮಾನ ಅನುಭವಿಸಿದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ಸೇರಿ ದಾರಿ ತಪ್ಪಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಜಗದೀಶ ಶೆಟ್ಟರ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರ ಪರವಾಗಿ ಪ್ರಚಾರಾರ್ಥವಾಗಿ ರೋಡ್ ಶೋ ನಡೆಸಿ ಬಳಿಕ ಸಾರ್ವಜನಿಕ ಉದ್ದೇಶಿಸಿ ಮಾತನಾಡಿದರು.

ಜಗದೀಶ ಶೆಟ್ಟರ ಅವರಿಗೆ ಮೇ ೧೦ ರವರೆಗೆ ಮಾತ್ರ ಕಾಂಗ್ರೆಸ್ ನಲ್ಲಿ ಮಾನ ಸನ್ಮಾನವಷ್ಟೆ. ಆದರೆ ಕಾರ್ಯಕರ್ತ ಎಚ್ಚರಿಕೆಯಿಂದ ಇರಬೇಕು. ಬಿಜೆಪಿ ದೇಶದ ಪಕ್ಷವಾಗಿದೆ. ದೇಶ ಅಭಿವೃದ್ಧಿ ಶ್ರಮಿಸುತ್ತಿದೆ. ಬಿಜೆಪಿ ಬೆಂಬಲ ನೀಡಿ ಮಹೇಶ ಟೆಂಗಿನಕಾಯಿ ಅವರನ್ನು ವಿಧಾನ ಸೌಧಕ್ಕೆ ಕಳುಹಿಸಬೇಕು. ಸೆಂಟ್ರಲ್ ಕ್ಷೇತ್ರದ ಅಭಿವೃದ್ಧಿ ಎಷ್ಟು ಅನುದಾನಬೇಕೋ ಅಷ್ಟನ್ನು ನೀಡುವುದಾಗಿ ಭರವಸೆ ನೀಡಿದರು.
ನಮ್ಮ ಪಕ್ಷ ಈ ಬಾರಿ ಯುವಜನರಿಗೆ ಅವಕಾಶ ನೀಡಿದೆ. ಹುಬ್ಬಳ್ಳಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರ ದಿಂದ ಆಗಿದೆ. ಮಹಾನಗರ ಪಾಲಿಕೆಯಲ್ಲಿ ಹಣಕಾಸಿನ ಕೊರತೆ ಇದ್ದರೂ, ಅಭಿವೃದ್ಧಿಗೆ ಸರ್ಕಾರ‌ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ‌ ಇದ್ದಾಗ ಅವಳಿನಗರವನ್ನು ಕಡೆಗಣಿಸಿದೆ ಎಂದು ಹೇಳಿದರು.

ಪಾಲಿಕೆ ನೌಕರರಿಗೆ ಸಂಬಳ‌ ಸಿಗುವುದು ಕಷ್ಟವಾಗಿತ್ತು. ಯಡಿಯೂರಪ್ಪ ನಂತರ, ನಾನು ಸಿ.ಎಂ ಆದ ಬಳಿಕ‌ ಮಹಾನಗರಕ್ಕೆ ಸುಮಾರು ೩೦೦ ಕೋಟಿ ಕೊಟ್ಟಿದ್ದೇನೆ. ಕಳೆದ ಆರು ಸಲ ಬಿಜೆಪಿಗೆ ನೀವು ಮತ ಹಾಕಿದ್ದೀರಿ. ಪಕ್ಷ ಮತ್ತು ಕೇಂದ್ರದ ನಾಯಕತ್ವಕ್ಕೆ ಮನ್ನಣೆ ನೀಡಿದ್ದೀರಿ. ಅದರಂತೆ, ಈ ಸಲವೂ ಟೆಂಗಿನಕಾಯಿ ಆಯ್ಕೆಮಾಡಿ ಕಳಿಸಿ. ಮಹಾನಗರದ ಅಭಿವೃದ್ಧಿಗೆ ಬೇಕಾದರ ಅನುದಾನ ಕೊಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!