ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಮ್ರಾ ಬಿಗಿ ಬೌಲಿಂಗ್ ದಾಳಿಗೆ ಎಡವಿದ ಲಕ್ನೋ 161 ರನ್ ಗಳಿಸಿ ಆಟೌಟ್ ಆಗಿ ಹೀನಾಯ ಸೋಲು ಕಂಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. 216 ರನ್ ಗುರಿ ಬೆನ್ನತ್ತಿದ ಲಕ್ನೋ ನಿಗದಿತ ಓವರ್ಗೆ 161 ರನ್ ಗಳಿಸಿ ಆಟೌಟ್ ಆಗಿ ಹೀನಾಯ ಸೋಲು ಕಂಡಿತು.
ಲಕ್ನೋ ಬ್ಯಾಟಿಂಗ್ನಲ್ಲಿ. 6 ಓವರ್ ಹೊತ್ತಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಮಿಚೆಲ್ ಮಾರ್ಷ್ 34, ಆಯುಷ್ ಬದೋನಿ 35, ನಿಕೊಲಸ್ ಪೂರನ್ 27, ಡೇವಿಡ್ ಮಿಲ್ಲರ್ 24 ರನ್ ಗಳಿಸಿದರು.
ಉಳಿದಂತೆ ಯಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿರುವ ಕ್ಯಾಪ್ಟನ್ ರಿಷಬ್ ಪಂತ್ ಕಳೆಗುಂದಿದ್ದಾರೆ. ಪಂತ್ ಕೇವಲ 4 ರನ್ ಗಳಿಸಿ ಔಟಾಗಿದ್ದು, ನಿರಾಸೆ ಮೂಡಿಸಿತು.
ಮುಂಬೈ ಪರ ಜಸ್ಪ್ರಿತ್ ಬುಮ್ರಾ 4 ವಿಕೆಟ್ ಕಿತ್ತು ಮಿಂಚಿದರು. ಇವರ ಜೊತೆ ಜೊತೆಗೆ ಟ್ರೆಂಟ್ ಬೌಲ್ಟ್ ಕೂಡ 3 ವಿಕೆಟ್ ಕಬಳಿಸಿ ನಿರ್ಣಾಯಕ ಪಾತ್ರ ವಹಿಸಿದರು. ವಿಲ್ ಜಾಕ್ಸ್ 2, ಕಾರ್ಬಿನ್ ಬಾಷ್ 1 ವಿಕೆಟ್ ಪಡೆದರು.