ಹೊಸದಿಗಂತ ವರದಿ ಪುತ್ತೂರು:
ಇಳಂತಿಲ ನಿವಾಸಿ ಚಂದ್ರಯ್ಯ ಮೇಸ್ತ್ರಿ ಎಂಬವರು ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ರೂ.50 ಲಕ್ಷ ಗೆದ್ದಿದ್ದಾರೆ.
ಚಂದ್ರಯ್ಯ ಮೇಸ್ತ್ರಿ ಅವರು ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಲಾಟರಿ ಟಿಕೆಟ್ ಖರೀದಿಸಿದ್ದರು. ಸೆ.20 ರಂದು ಓಣಂ ಲಾಟರಿ ಡ್ರಾ ನಡೆದಾಗ ಅವರು ಬಂಪರ್ ಬಹುಮಾನ ಗೆದ್ದಿದ್ದಾರೆ. ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು.
500 ರೂಪಾಯಿ ಟಿಕೆಟ್ ಖರೀದಿಸಿದ್ದ ಚಂದ್ರಯ್ಯ ಬಂಪರ್ ರೂ.50 ಲಕ್ಷ ಬಹುಮಾನ ದೊರಕಿದ ಸಂಭ್ರಮದಲ್ಲಿದ್ದಾರೆ. ಈ ಹಿಂದೆ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಟಿಕೆಟ್ ಖರೀದಿಸಿದ್ದ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿ ಆನಂದ ಟೈಲರ್ ಎಂಬವರಿಗೆ ರೂ.80 ಲಕ್ಷ ಬಹುಮಾನ ಬಂದಿತ್ತು. ಇದೀಗ ಎರಡನೇ ಬಾರಿಗೆ ಉಪ್ಪಿನಂಗಡಿಯ ಚಂದ್ರಯ್ಯ ಅವರಿಗೆ ಅದೃಷ್ಟ ಒಲಿದಿದೆ.