ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವ ಚಿಂತಕ, ಸಾಮಾಜಿಕ ಹೋರಾಟಗಾರ ಎಂ. ಸಂತೋಷ್ ಕುಮಾರ್ ಪ್ರತಿಷ್ಠಿತ ನ್ಯಾಷನಲ್ ಯೂತ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೆಮೋರಿಯಲ್ ಅವಾರ್ಡ್ ಪ್ರಶಸ್ತಿ ಸೇರಿದಂತೆ 9 ರಾಜ್ಯ ಪ್ರಶಸ್ತಿ 8 ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂತೋಷ್ ಕುಮಾರ್ ಸುಮಾರು 15 ವರ್ಷಗಳಿಂದ ಜನಪರ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.
ವೃದ್ಧರು, ನಿರಾಶ್ರಿತರು, ದೀನ ದಲಿತರಿಗೆ ಸಹಾಯ ಜತೆಗೆ ಬಡ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ, ಅಂಗವಿಕಲರಿಗೆ ಹಣ್ಣು ಹಂಪಲು ವಿತರಣೆ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಅನುಪಮ ಸೇವೆಯನ್ನು ಗುರುತಿಸಿ ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿ ವತಿಯಿಂದ ಕೊಡುವ “ನ್ಯಾಷನಲ್ ಯೂತ್ ಐಕಾನ್ ಅವಾರ್ಡ್” ಗೆ ಆಯ್ಕೆಮಾಡಲಾಗಿದೆ ಮತ್ತು ಇದೆ ಜೂನ್ 29 ರಂದು ಸಂತೋಷ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.